Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಅಮೆರಿಕ ನೌಕಾ ದಳದ ಅಡ್ಮಿರಲ್ ಹೇಳಿಕೆ ‘ಟ್ರಂಪ್ ಆದೇಶ ನೀಡಿದರೆ ಚೀನಾ ಮೇಲೆ ಅಣ್ವಸ್ತ್ರ ದಾಳಿ’

ಮೆಲ್ಬರ್ನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ನೀಡಿದರೆ ಚೀನಾದ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಸಿದ್ಧರಾಗಿರುವುದಾಗಿ ಅಮೆರಿಕದ ನೌಕಾಪಡೆಯ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಕ್ಯಾನ್‌ಬೆರ್ರಾ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಭಾಗವಹಿಸಿದ್ದ ಅವರಲ್ಲಿ, ಚೀನಾ ಮೇಲೆ ಅಣ್ವಸ್ತ್ರ ದಾಳಿ ನಡೆಸುವಂತೆ ಟ್ರಂಪ್ ಆದೇಶ ನೀಡಿದರೆ ನೀವು ಅದಕ್ಕೆ ಸಿದ್ಧರಿದ್ದೀರಾ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಅವರು ‘ಹೌದು’ ಉತ್ತರಿಸಿದ್ದಾರೆ.

ನಂತರ ಈ ಬಗ್ಗೆ ಅಡ್ಮಿರಲ್ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದು, ಅಡ್ಮಿರಲ್ ಅವರಿಗೆ ಕೇಳಲಾದ ಪ್ರಶ್ನೆ ಅತಿರೇಕದಿಂದ ಕೂಡಿದ ಮತ್ತು ತೀರಾ ಭಾವನಾತ್ಮಕವಾದದ್ದಾಗಿತ್ತು. ಇಂಥ ಪ್ರಶ್ನೆ ಕೇಳುವುದೇ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಈ ಮಧ್ಯೆ, ಸ್ಕಾಟ್ ಸ್ವಿಫ್ಟ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಚೀನಾ ಹೇಳಿದೆ. ‘ಅನೇಕರು ಸ್ವಿಫ್ಟ್ ಹೇಳಿಕೆ ಬಗ್ಗೆ ಗಭೀರವಾಗಿ ಗಮನಹರಿಸಿದ್ದಾರೆ. ಆದರೆ, ಸ್ವಿಫ್ಟ್ ಅವರ ವಕ್ತಾರರೇ ಅವರ ಹೇಳಿಕೆಯಲ್ಲಿನ ಹಾಸ್ಯಾಸ್ಪದತೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

No Comments

Leave A Comment