Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಮೊದಲ ಟೆಸ್ಟ್‌ ಪಂದ್ಯ ಶ್ರೀಲಂಕಾ ವಿರುದ್ಧ ಶಿಖರ್‌ ಧವನ್‌ ಭರ್ಜರಿ ಶತಕ, ಪೂಜಾರ ಅರ್ಧಶತಕ

ಗಾಲ್‌: ಭಾರತ ಕ್ರಿಕೆಟ್‌ ತಂಡ ಬುಧವಾರ ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅತಿಥೇಯ ಶ್ರಿಲಂಕಾ ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಆಡುತ್ತಿದೆ.

ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಭಾರತ 48 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 241 ರನ್‌ ಗಳಿಸಿದೆ.(ಅಭಿನವ್‌ ಮುಕುಂದ್‌ 12, ಶಿಖರ್‌ ಧವನ್‌ ಬ್ಯಾಟಿಂಗ್‌ 160, ಚೇತೇಶ್ವರ್‌ ಪೂಜಾರ ಬ್ಯಾಟಿಂಗ್‌ 65)

ಶಿಖರ್‌ ಧವನ್‌ (160), ಚೇತೇಶ್ವರ್‌ ಪೂಜಾರ (65) ಉತ್ತಮ ಜತೆಯಾಟದ ನೆರೆವಿನಿಂದ ಶ್ರೀಲಂಕಾ ತಂಡದ ವಿರುದ್ಧ ಭಾರತ ಬೃಹತ್‌ ಮೊತ್ತ ಪೇರಿಸುವ ಮುನ್ಸೂಚನೆ ನೀಡಿದೆ…

ಎರಡು ವರ್ಷಗಳ ನಂತರ ವಿರಾಟ್‌ ಕೊಹ್ಲಿ ಪಡೆಯು ಈ ಕ್ರೀಡಾಂಗಣದಲ್ಲಿ ಟೆಸ್ಟ್‌ ಪಂದ್ಯ ಆಡುತ್ತಿದ್ದು, ಇದರೊಂದಿಗೆ ಮೂರು ಟೆಸ್ಟ್‌ ಪಂದ್ಯಗಳ ಸರಣಿಗೆ ಚಾಲನೆ ದೊರೆತಿದೆ.

No Comments

Leave A Comment