Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ದುಬೈ ವಿಮಾನದಲ್ಲಿ 7 ಕೆ.ಜಿ ಅಕ್ರಮ ಚಿನ್ನಸಾಗಾಟ;ಸಿಬಂದಿಗಳು ಶಾಮೀಲು?

ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ  ದುಬೈನಿಂದ ಬಂದಿಳಿದ ವಿಮಾನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 7 ಕೆ.ಜಿಯಷ್ಟು  ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಜೆಟ್‌ ವಿಮಾನ ಸಂಸ್ಥೆಯ ಇಂಜಿನಿಯರ್‌ ಲಾಲ್‌ಬಿನ್‌ ಮತ್ತು ಮ್ಯಾನೇಜರ್‌ ಹೈದರ್‌ ಎನ್ನುವವರು ಈ ಕೃತ್ಯದಲ್ಲಿ ಶಾಮಿಲಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಹಿಂದೆ ಪತ್ತೆಯಾಗಿದ್ದ ಚಿನ್ನ ಸಾಗಾಣಿಕೆಯಲ್ಲೂ ಇವರ ಪಾತ್ರವಿದೆ ಎನ್ನಲಾಗಿದೆ.

ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಲಾಲ್‌ಬಿನ್‌ ಮತ್ತು ಹೈದರ್‌ನ ವಿಚಾರಣೆ ನಡೆಸುತ್ತಿದ್ದಾರೆ.

No Comments

Leave A Comment