Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಬ್ಯಾಂಕಿನ ಕ್ಯಾಶ್‌ ಕೌಂಟರ್‌ನಲ್ಲಿದ್ದ 6 ಲಕ್ಷ ರೂ. ಅಪಹರಿಸಿದ ಬಾಲಕ

ಉತ್ತರ ಪ್ರದೇಶ : ಹದಿ ಹರೆಯದ ಹುಡುಗನೋರ್ವ ಇಲ್ಲಿನ ಎಸ್‌ಬಿಐ ಶಾಖೆ ಪ್ರವೇಶಿಸಿ ಕ್ಯಾಶ್‌ ಕೌಂಟರ್‌ನಲ್ಲಿ ಕ್ಯಾಶಿಯರ್‌ ಇಲ್ಲದಿದ್ದಾಗ ಅಲ್ಲಿದ್ದ ಆರು ಲಕ್ಷ ರೂ.ಗಳನ್ನು ಅಪಹರಿಸಿ ಒಯ್ದಿರುವ ಘಟನೆ ನಡೆದಿದೆ.

ಕ್ಯಾಶಿಯರ್‌ ಆರು ಲಕ್ಷ ರೂ. ಹಣವನ್ನು ತನ್ನ ಡ್ರಾಯರ್‌ನಲ್ಲಿರಿಸಿ ಸ್ವಲ್ಪ ಹೊತ್ತಿನ ಮಟ್ಟಿಗೆ ಆಚೆಗೆ ಹೋಗಿದ್ದಾಗ ಆರೋಪಿ ಹುಡುಗನು ಕ್ಯಾಶಿಯರ್‌ ಕೋಣೆ ಪ್ರವೇಶಿಸಿ ಡ್ರಾಯರ್‌ನಲ್ಲಿದ್ದ ಹಣವನ್ನು ಕದ್ದೊಯ್ದನು ಎಂದು ಬಂದಾ ಡಿಐಜಿ ಜ್ಞಾನೇಶ್ವರ್‌ ತಿವಾರಿ ತಿಳಿಸಿದ್ದಾರೆ.

ಬ್ಯಾಂಕಿನಲ್ಲಿರುವ ಸಿಸಿಟಿವಿಯಲ್ಲಿ ದಾಖಾಲಾಗಿರುವ ಚಿತ್ರಿಕೆಗಳನ್ನು ಈಗ ಪರಿಶೀಲಿಸಲಾಗುತ್ತಿದ್ದು ಹುಡುಗನನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದವರು ಹೇಳಿದ್ದಾರೆ.

ಹುಡುಗನು ಈ ಕಳವು ಕೃತ್ಯ ಎಸಗುವಾಗ ಬ್ಯಾಂಕಿನೊಳಗೆ ಹಲವಾರು ಗ್ರಾಹಕರು, ಭದ್ರತಾ ಸಿಬಂದಿ ಇದ್ದರೂ ಅದು ಯಾರ ಗಮನಕ್ಕೂ ಬಾರದೇ ಹೋಯಿತು ಎಂದು ಡಿಐಜಿ ಹೇಳಿದ್ದಾರೆ.

No Comments

Leave A Comment