Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಮಂಗಳೂರು: ರೌಡಿಶೀಟರ್ ಬರ್ಬರ ಹತ್ಯೆ; 2 ದಿನದ ಬಳಿಕ ಶವ ಪತ್ತೆ

ಮಂಗಳೂರು: ರೌಡಿಶೀಟರ್ ವಾಮಂಜೂರು ಪವನ್ ರಾಜ್ ಶೆಟ್ಟಿ(20) ಎಂಬ ಯುವಕನನ್ನು ದುಷ್ಕರ್ಮಿಗಳು ಭಾನುವಾರ ರಾತ್ರಿ ತಲವಾರಿನಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದು, ಶವ ಮಂಗಳವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. .

ಈತನ ತಂದೆ ರೌಡಿ ರೋಹಿ 8 ವರ್ಷದ ಹಿಂದೆ ಬರ್ಬರವಾಗಿ ಹತ್ಯೆಗೀಡಾಗಿದ್ದ. ಹತ್ಯೆಗೀಡಾದ  ಪವನ್ ರಾಜ್  ಮೂರು ಕೊಲೆ ಪ್ರಕರಣದ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.


ಅಮೃತನಗರ ಫ‌ಸ್ಟ್‌ ಬ್ಲಾಕ್‌ನಲ್ಲಿ ಹತ್ಯೆಗೈಯಲಾಗಿದ್ದು ಶವದ ಬಳಿಯೇ ತಲವಾರುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಈತ ಗಾಂಜಾ ವ್ಯವಹಾರ ಮಾಡಿಕೊಂಡಿದ್ದ ಎನ್ನಲಾಗಿದ್ದು, ಸ್ನೇಹಿತರೊಂದಿಗೆ ಪಾರ್ಟಿ ನಡೆಸುವ ವೇಳೆ ಹತ್ಯೆ ನಡೆದಿದೆ ಎನ್ನಲಾಗಿದೆ.

ಇತ್ತೀಚೆಗೆ ಜೈಲಿನಿಂದ ಜಾಮೀನು ಮೇಲೆ ಹೊರಬಂದಿದ್ದು, ಈತನ ಕೊಲೆಗೆ 2ವರ್ಷದಿಂದ ಪ್ರಯತ್ನ ನಡೆಯುತ್ತಿತ್ತೆನ್ನಲಾಗಿದೆ.

ಶವ ವಾಸನೆ ಬರುತ್ತಿದ್ದುದರಿಂದ ಜನರು ಅನುಮಾನದಲ್ಲಿ ಹುಡುಕಾಟ ನಡೆಸುವಾಗ ಹತ್ಯೆ ಬಯಲಿಗೆ ಬಂದಿದೆ.

ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment