Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಸಾಂಕ್ರಾಮಿಕ ರೋಗ ತಡೆಗೆ 2 ಕೋಟಿ ಸೊಳ್ಳೆ ಬಿಟ್ಟ ಗೂಗಲ್!

 ವಾಷಿಂಗ್ಟನ್: ಖ್ಯಾತ ಸರ್ಚ್ ಎಂಜಿನ್ ಗೂಗಲ್ ತನ್ನ ಸಹಭಾಗಿತ್ವದ ಸಂಸ್ಥೆ ಮೂಲಕ ಅಮೆರಿಕದಲ್ಲಿ ಬರೊಬ್ಬರಿ 2 ಕೋಟಿ ಸೊಳ್ಳೆಗಳನ್ನು ವಾತಾವರಣಕ್ಕೆ ಬಿಡುವುದಾಗಿ ಹೇಳಿಕೊಂಡಿದೆ.

ಅರೆ ಸಾಫ್ಟ್ ವೇರ್ ಅಭಿವೃದ್ಧಿ ಬಿಟ್ಟು ಸೊಳ್ಳೆ ಅಭಿವೃದ್ಧಿ ಗೆ ಗೂಗಲ್ ಮುಂದಾಗಿದ್ದೇಕೆ? ಈಗಿರುವ ಸೊಳ್ಳೆಗಳ ಕಾಟ ತಾಳರಾದೇ ಜನ ಡೆಂಗ್ಯೂ, ಚಿಕನ್ ಗೂನ್ಯಾದಂತಹ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದರೆ ಗೂಗಲ್  ಸೊಳ್ಳೆಗಳನ್ನು ಬಿಡುವ ಮೂಲಕ ರೋಗ ಹರಡುವಂತೆ ಮಾಡುತ್ತಿದೆ ಎಂದು ಗೊಂದಲಕ್ಕೀಡಾಗಬೇಡಿ. ಅಸಲಿಗೆ ಗೂಗಲ್ ಇದೇ ಸಾಂಕ್ರಾಮಿಕ ರೋಗ ತಡೆಗಾಗಿ ಈ ಸೊಳ್ಳೆಗಳನ್ನು ವಾತಾವರಣಕ್ಕೆ ಬಿಟ್ಟಿದೆ. ಹೌದು..ಗೂಗಲ್  ವಾತವಾರಣಕ್ಕೆ ಬಿಡುಗಡೆ ಮಾಡುತ್ತಿರುವ ಈ ವಿಶಿಷ್ಟ ಸೊಳ್ಳೆಗಳು ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್ ಗೂನ್ಯಾದಂತಹ ರೋಗಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆಯಂತೆ.ಹೇಗೆ ನೂತನ ತಂತ್ರಜ್ಞಾನದ ಮೂಲಕ ಜನರ ಜೀವನ ಶೈಲಿಯನ್ನು ಸುಲಭಗೊಳಿಸುತ್ತಿದೆಯೋ ಅದೇ ಮಾದರಿಯಲ್ಲಿ ಮನುಕುಲದ ಇತಿಹಾಸಕ್ಕೆ ಹೊಸ ಕೊಡುಗೆಯನ್ನು ನೀಡಲು ಗೂಗಲ್ ಮುಂದಾಗಿದೆ.

ಗೂಗಲ್  ಅಭಿಪ್ರಾಯದಂತೆ ಇಡೀ ಜಗತ್ತಿನ ಅತ್ಯಂತ ಭಯಂಕರ ಖಾಯಿಲೆಗಳನ್ನು ಹರಡುವುದರಲ್ಲಿ ಸೊಳ್ಳೆಗಳ ಪಾತ್ರವೇ ಪ್ರಮುಖವಾಗಿರುತ್ತದೆ. ಈ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ, ಚಿಕನ್ ಗೂನ್ಯಾ ಸೇರಿದಂತೆ ಹಲವು ಭಯಾನಕ  ರೋಗಗಳು ಹರಡುವುದಲ್ಲೇ ಮನುಷ್ಯರ ಜೀವಕ್ಕೆ ಅಪಾಯವಿರುತ್ತಿದೆ. ಇಂತಹ ಸೊಳ್ಳೆಗಳ ನಿಯಂತ್ರಕ್ಕೆ ಗೂಗಲ್ ತನ್ನೇ ಸೊಳ್ಳೆ ಪಡೆಯನ್ನು ಕಟ್ಟಿದೆ. ಅವುಗಳನ್ನು ಸದ್ಯ ವಾತಾವರಣಕ್ಕೆ ಬಿಟ್ಟಿದೆ.ಸದ್ಯ ಗೂಗಲ್ 2 ಕೋಟಿ ಗಂಡು ಸೊಳ್ಳೆಗಳನ್ನು ಬಿಡುಗಡೆ ಮಾಡಿದ್ದು, ಇದು ವಾತಾವರಣದಲ್ಲಿರುವ ಹೆಣ್ಣು ಸೊಳ್ಳೆಗಳನ್ನು ಆಕರ್ಷಿಸುವುದಲ್ಲದೇ ಅವುಗಳೊಂದಿಗೆ ಸಂಪರ್ಕವನ್ನು ಹೊಂದಿ ಹೆಣ್ಣು ಸೊಳ್ಳೆಗಳಿಗೆ ಗರ್ಭಧರಿಸುವಂತೆ  ಮಾಡುತ್ತವೆ. ಹೆಣ್ಣು ಸೊಳ್ಳೆಗಳು ಇಡುವ ಮೊಟ್ಟೆಗಳು ಮರಿಯಾಗುವುದಿಲ್ಲ. ಈ ಮೂಲಕ ಅವುಗಳ ಸಂತನೋತ್ಪತಿಯನ್ನು ತಡೆಯಲಿವೆ.

ಇನ್ನೂ ವಿಶೇಷವೆಂದರೆ ಗೂಗಲ್ ಬಿಟ್ಟಿರುವ ಈ ವಿಶಿಷ್ಠ ಸೊಳ್ಳೆಗಳು ಜನ ಸಾಮಾನ್ಯರಿಗೆ  ಕಚ್ಚುವುದಿಲ್ಲವಂತೆ. ಇದು ಕೇವಲ ಸಾಂಕ್ರಾಮಿಕ ರೋಗ ಹರಡುವ ಹೆಣ್ಣು ಸೊಳ್ಳೆಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಈ ಸೊಳ್ಳೆಗಳಿಂದ ಜನರಿಗೆ ತೊಂದರೆಯಾಗುವುದಿಲ್ಲ ಎಂದು ಗೂಗಲ್ ಹೇಳಿಕೊಂಡಿದೆ.

ಸೊಳ್ಳೆಗಳಲ್ಲಿವೆ ಗರ್ಭ ಸಾಯುವ ಬ್ಯಾಕ್ಟೀರಿಯಾಇನ್ನು ಈ ವಿಶಿಷ್ಠ ಸೊಳ್ಳೆಗಳಲ್ಲಿ ಸೊಳ್ಳೆಗಳ ಮೊಟ್ಟೆ ಬೆಳೆಯದಂತೆ ಮಾಡುವ ವಿಶಿಷ್ಠ ಬ್ಯಾಕ್ಟೀರಿಯಾಗಳನ್ನು ಇಂಜೆಕ್ಟ್ ಮಾಡಲಾಗಿದ್ದು, ಈ ಲ್ಯಾಬ್ ನಲ್ಲಿ ತಯಾರಾದ ಗಂಡುಸೊಳ್ಳೆಗಳೊಂದಿಗೆ ರೋಗ ಹರಡುವ ಹೆಣ್ಣು ಸೊಳ್ಳೆಗಳು  ಸಂಪರ್ಕ ಸಾಧಿಸಿ ಗರ್ಭಧರಿಸಿ ಮೊಟ್ಟೆ ಇಡುತ್ತವೆಯಾದರೂ, ಈ ಮೊಟ್ಟೆಗಳು ಮರಿಗಳಾಗದಂತೆ ಗಂಡುಸೊಳ್ಳೆಗಳಲ್ಲಿರುವ ಬ್ಯಾಕ್ಟೀರಿಯಾ ಅವುಗಳನ್ನು ಗರ್ಭಾವಸ್ಥೆಯಲ್ಲಿ ಕೊಂದು ಹಾಕುತ್ತದೆ. ಹೀಗಾಗಿ ಸೊಳ್ಳೆ ಮೊಟ್ಟೆ ಇಟ್ಟರೂ  ಅವುಗಳು ಮರಿಗಳಾಗುವುದಿಲ್ಲ ಎಂಬುದು ಗೂಗಲ್ ವಿಜ್ಞಾನಿಗಳ ಅಭಿಪ್ರಾಯ.

ಗೂಗಲ್ ಬಿಟ್ಟಿರುವ ಸೊಳ್ಳೆಗಳು ಸದ್ಯ ಜಾಗತಿಕವಾಗಿ ತೊಂದರೆಯನ್ನು ಉಂಟು ಮಾಡುತ್ತಿರುವ ಜೀಕಾ, ಚಿಕೂನ್ ಗುನ್ಯಾ, ಡೇಂಗ್ಯೂ ನಂತಹ ಮಾರಕ ಖಾಯಿಲೆಗಳನ್ನು ಹರಡುತ್ತಿರುವ ಸೊಳ್ಳೆಗಳನ್ನು ನಿಯಂತ್ರಿಸಲು  ಸಹಾಯಕವಾಗುತ್ತದೆ ಸೊಳ್ಳೆ ಅಭಿವೃದ್ಧಿ ಪಡಿಸಿರುವ ಗೂಗಲ್ ನ ಅಂಗ ಸಂಸ್ಥೆಯಾದ ಆಲ್ಫಾಬೆಟ್ಸ್ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ. ವಿಜ್ಞಾನಿಗಳ ಅಭಿಪ್ರಾಯದಂತೆ ಸೊಳ್ಳೆಗಳನ್ನು ಸೊಳ್ಳೆಗಳಿಂದಲೇ ನಿರ್ಮೂಲನೆ ಮಾಡುವ  ಕಾರ್ಯಕ್ಕೆ ಮುಂದಾಗಿದೆ. ಒಮ್ಮೆ ಈ ಪ್ರಯೋಗವು ಯಶಸ್ವಿಯಾಯಿತು ಎಂದದಾರೆ ಮುಂದಿನ ತಲೆಮಾರಿಗೆ ಸೊಳ್ಳೆಗಳು ಬರಿ ನೆನಪು ಮಾತ್ರ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗೂಗಲ್ ಅಂಗ ಸಂಸ್ಥೆಯಾದ ಆಲ್ಫಾಬೆಟ್ಸ್ ಈ  ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ವಿಜ್ಞಾನಿಗಳ ತಂಡ ತಮ್ಮ ಈ ಯೋಜನೆಗೆ “ಡಿಬಗ್ ಫ್ರೆಸ್ನೊ” ಎಂದು ನಾಮಕರಣ ಮಾಡಿದೆ.

ಆರಂಭಿಕ ಹಂತದಲ್ಲಿ ಅಮೆರಿಕದಲ್ಲಿ ಈ ಗೂಗಲ್ ಸೊಳ್ಳೆಗಳ ಕಾರ್ಯಾಚರಣೆ!

ಸದ್ಯ ಈ ಸೊಳ್ಳೆಗಳು ಆರಂಭಿಕ ಹಂತದಲ್ಲಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಕಾರ್ಯಚರಣೆ ನಡೆಸಲಿದ್ದು, ಅಲ್ಲಿ ಯಶಸ್ವಿಯಾದರೆ ವಿಶ್ವದೆಲ್ಲಡೆ ಕಾಣಿಸಿಕೊಳ್ಳಲಿದೆ. ವಾರಕ್ಕೆ 10 ಸಾವಿರದಂತೆ ಸತತ 20 ವಾರಗಳ  ಸೊಳ್ಳೆಗಳನ್ನು ಬಿಡುಗಡೆ ಮಾಡಲು ಗೂಗಲ್ ವಿಜ್ಞಾನಿಗಳು ನಿರ್ಧರಿಸಿದ್ದು, ಅದರಂತೆ 20 ವಾರಗಳ ಅಂತ್ಯಕ್ಕೆ 2 ಕೋಟಿ ಸೊಳ್ಳೆಗಳನ್ನು ವಾತಾವರಣಕ್ಕೆ ಬಿಡುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ  ನಡೆಸಲಾಗಿದ್ದು, ಗೂಗಲ್ ವಿಜ್ಞಾನಿ ಈ ಆವಿಷ್ಕಾರ ವನ್ನು ಆರೋಗ್ಯ ಇಲಾಖೆಗೆ ದೊಡ್ಡ ಕೊಡುಗೆ ಎಂದು ಶ್ಲಾಘಿಸಲಾಗುತ್ತಿದೆ.

 

No Comments

Leave A Comment