Log In
BREAKING NEWS >
ಗೋಶಾಲೆಯಲ್ಲಿ 200 ಹಸುಗಳ ಸಾವು ಪ್ರಕರಣ: ಬಿಜೆಪಿ ಮುಖಂಡ ಬಂಧನ....ಉಗ್ರರು ಒಳ ನಸುಳಿರುವ ಶಂಕೆ: ಶೋಪಿಯಾನ್ ಜಿಲ್ಲೆಯ 9 ಗ್ರಾಮಗಳಲ್ಲಿ ತೀವ್ರ ಸೇನಾ ಶೋಧ....

ಮನೆಯಲ್ಲಿ ಗಾಂಜಾ ಸಂಗ್ರಹ: ನಟಿ ಕಾಜಲ್ ಅಗರ್ ವಾಲ್ ಮ್ಯಾನೇಜರ್ ಬಂಧನ

ಹೈದರಾಬಾದ್‌: ತೀವ್ರ ಸಂಚಲನ ಮೂಡಿಸಿರುವ ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ  ನಟಿ ಕಾಜಲ್ ಅಗರ್ ವಾಲ್ ಮ್ಯಾನೇಜರ್ ನನ್ನು  ಪೊಲೀಸರು  ಬಂಧಿಸಿದ್ದಾರೆ.

ನಟಿ ಕಾಜಲ್ ಮ್ಯಾನೇಜರ್ ಪುಟ್ಕರ್ ರಾನ್ಸನ್ ಜೋಸೆಫ್ ಅಲಿಯಾಸ್ ಜಾನಿ ಜೊಸೆಪ್ ಮನೆಯಲ್ಲಿ 4 ಗ್ರಾಂ ಗಾಂಜಾ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

38 ವರ್ಷದ ರಾನ್ಸನ್ ಜೊಸೆಫ್ ವಾಸವಿರುವ ಮನಿಕೊಂಡದ ಪ್ರೈಡ್ ಅಪಾರ್ಟ್ ಮೆಂಟ್ ನಲ್ಲಿ ಗಾಂಜಾ ಪತ್ತೆಯಾಗಿದೆ. ಮಾದಕ ದ್ರವ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎಸ್ ಐಟಿ ಈಗಾಗಲೇ 12 ಟಾಲಿವುಡ್ ಕಲಾವಿದರಿಗೆ  ಸಮನ್ಸ್ ನೀಡಿದೆ.ಡ್ರಗ್ಸ್ ಕೇಸ್ ಸಂಬಂಧ ಪಟ್ಟಂತೆ ರಾನ್ಸನ್ ಜೊಸೆಫ್ ಸೇರಿದಂತೆ ಇದುವರೆಗೂ 19 ಮಂದಿಯನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಈವರೆಗೆ ಚಿತ್ರರಂಗದವರನ್ನು ವಿಚಾರಣೆಗೆ ಒಳಪಡಿಸಿರುವ ಎಸ್ ಐಟಿ ಅಧಿಕಾರಿಗಳು ಅವರು ನೀಡಿದ ಮಾಹಿತಿ ಆಧರಿಸಿಯೇ ಜೋಸೆಫ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇಂತಹ ಹಲವಾರು ವ್ಯಕ್ತಿಗಳ ಮೇಲೆ ಪೊಲೀಸರು ದೃಷ್ಟಿ ಹಾಯಿಸಿದ್ದು ಮತ್ತಷ್ಟು ಸೆಲಬ್ಧರಿಟಿಗಳು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

No Comments

Leave A Comment