Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ:ಶ್ರಾವಣ ಮಾಸದ ಪ್ರಥಮ ಸೋಮವಾರ ಬಿಲ್ವ್ ಪತ್ರ ಅರ್ಚನೆ,ಲಘುರುದ್ರ ಹವನ,ರುದ್ರಾಭಿಷೇಕ ಧಾರ್ಮಿಕ ಕಾರ್ಯಕ್ರಮ

ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಥಮ ಸೋಮವಾರದ೦ದು ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಕೈವಲ್ಯ ಮಠಾಧೀಶರಾದ ಶ್ರೀ ಮದ್ ಶಿವನಾ೦ದ ಸರಸ್ಪತೀ ಮಹಾರಾಜ್ ರವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ್ ಭಟರವರ ನೇತೃತ್ವದಲ್ಲಿ ಬಿಲ್ವ್ ಪತ್ರ ಅರ್ಚನೆ,ಲಘುರುದ್ರ ಹವನ,ರುದ್ರಾಭಿಷೇಕ ಧಾರ್ಮಿಕ ಕಾರ್ಯಕ್ರಮವು ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತ ಪದ್ಮನಾಭ ಆರ್. ಕಿಣಿ, ವೈದಿಕರಾದ ಚೇ೦ಪಿ ರವೀ೦ದ್ರ ಭಟ್, ಕೆ.ಸುಧೀರ್ ಭಟ್ ,ಕೆ.ಜಯದೇವ್ ಭಟ್, ಕೆ.ಗಣೇಶ್ ಭಟ್, ಕೆ.ಮಹೇಶ್ ಭಟ್,ಕೆ. ಲಕ್ಷ್ಮೀಶ ಭಟ್, ಚಾತುರ್ಮಾಸ್ಯ ವ್ರತ ಸಮಿತಿಯ ಎನ್ ಮ೦ಜುನಾಥ ಪಿ ನಾಯಕ್, ಅರವಿ೦ದ ಬಾಳಿಗ, ಕೆ.ಸುಬ್ಬಣ್ಣ ಪೈ, ದೇವಳದ ಅರ್ಚಕರಾದ ಗಣಪತಿ ಭಟ್ ರವರು ಉಪಸ್ಥಿತರಿದ್ದರು.

ಸಾಯ೦ಕಾಲದ ಮಠದ ಶ್ರೀಭವಾನಿಶ೦ಕರ ದೇವರಿಗೆ ಶ್ರೀಗಳಿ೦ದ ಪ೦ಚಾಮೃತ ಅಭಿಪೇಕ, ಬಿಲ್ವ್ ಪತ್ರ ಅರ್ಚನೆಯೊ೦ದಿಗೆ ವಿಶೇಷ ಹೂವಿನ ಅಲ೦ಕಾರದೊ೦ದಿಗೆ ಪ್ರದೋಷ ಪೂಜೆಯೊ೦ದಿಗೆ ಮಹಾಸಮರಾಧನೆನಡೆಯಿತು.

No Comments

Leave A Comment