Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಭಾರತ-ಚೀನಾ ನಡುವೆ ಯುದ್ಧದ ಕಾರ್ಮೋಡ: ಭಾರತಕ್ಕೆ ಅತ್ಯಾಧುನಿಕ ಯುದ್ದ ವಿಮಾನ ಮಾರಾಟಕ್ಕೆ ರಷ್ಯಾ ರೆಡಿ

ನವದೆಹಲಿ: ರಷ್ಯಾ ತನ್ನ ಅತ್ಯಾಧುನಿಕ 4++ ಜನರೇಷನ್ ಮಿಗ್-35 ಯುದ್ಧ ವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ರೆಡಿಯಾಗಿದ್ದೇವೆ ಎಂದು ತಿಳಿಸಿದೆ.

ಭಾರತದ ವಾಯುಸೇನೆಗೆ ಆಧುನಿಕ ಜೆಟ್ ವಿಮಾನ ಮಾರಾಟ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದು ಯುದ್ಧ ವಿಮಾನ ಕೊಳ್ಳಲು ಭಾರತ ಸಹ ಆಸಕ್ತಿ ತೋರಿದೆ. ಐಎಎಫ್ ಜತೆ ಸಂಪರ್ಕದಲ್ಲಿದ್ದು ವಿಮಾನ ಮಾರಾಟ ಮಾಡಲು ಟೆಂಡರ್ ಪಡೆದುಕೊಳ್ಳಲು ಮಾತುಕತೆ ನಡೆಸಿದ್ದೇವೆ ಎಂದು ಮಿಗ್ ಕಾರ್ಪೋರೇಷನ್ ಇಲ್ಯಾ ತಾರಸೆಂಕೋ ಹೇಳಿದ್ದಾರೆ.

ಭಾರತ 50 ವರ್ಷಗಳಿಂದ ಮಿಗ್ ವಿಮಾನ ಉಪಯೋಗಿಸುತ್ತಿದೆ. ಆದ್ದರಿಂದ ಮಿಗ್ ಕಾರ್ಪೋರೇಷನ್ ತನ್ನ ನೂತನ ಯುದ್ಧ ವಿಮಾನ ಬಗ್ಗೆ ಭಾರತಕ್ಕೆ ಮೊದಲು ಪ್ರಸ್ತಾವನೆ ಸಲ್ಲಿಸಿದೆ. ಜತೆಗೆ ಭಾರತಕ್ಕೆ ಮಿಗ್-35 ಪೂರೈಸಲು ಸಿದ್ಧರಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

No Comments

Leave A Comment