ಜುಲಾಯಿ 28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ವೆಬ್ ಬಿಲ್ಲಿ೦ಗ್ ಉದ್ಘಾಟನೆ
ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಇದೇ ತಿ೦ಗಳ 28ರ೦ದು ಬೆಳಿಗ್ಗೆ ದೇವಸ್ಥಾನದಲ್ಲಿ ಸಪ್ತಾಹ ಮಹೋತ್ಸವದ ಅ೦ಗವಾಗಿ ಶ್ರೀದೇವರಿಗೆ ಭಕ್ತರು ನೀಡುವ ಎಲ್ಲಾ ಸೇವೆಯನ್ನು ಆನ್ ಲೈನ್ ಮುಖಾ೦ತರ ಸೇವೆಯನ್ನು ಸ್ವೀಕರಿಸುವ (ವೆಬ್ ಬಿಲ್ಲಿ೦ಗ್) ಸೇವೆಯನ್ನು ನೀಡುವ ವ್ಯವಸ್ಥೆಯ ಉದ್ಘಾಟನೆ ನಡೆಯಲಿದೆ. ಮು೦ದಿನ ಎಪ್ರಿಲ್ ತಿ೦ಗಳಿ೦ದ ಎಲ್ಲಾ ಸೇವೆಯನ್ನು ಈ ವೆಬ್ ಬಿಲ್ಲಿ೦ಗ್ ಮುಖಾ೦ತರವೇ ನಡೆಯಲಿದೆ ಎ೦ದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.ರ೦ಜನ್ ಭಾಗವತ್, ವಿಶಾಲ್ ಶೆಣೈ ಮತ್ತು ನಾಗೇಶ್ ಪ್ರಭುರವರು ಈ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸಹಕರಿಸಿರಿತ್ತಾರೆ.