Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಮೂರು ವರ್ಷಗಳಲ್ಲಿ ₹71,941 ಕೋಟಿ ಅಘೋಷಿತ ಆದಾಯ ಪತ್ತೆ: ಸುಪ್ರೀಂಗೆ ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ: ಭಾರತೀಯ ಆದಾಯ ತೆರಿಗೆ ಇಲಾಖೆ ಮೂರು ವರ್ಷಗಳಿಂದ ನಡೆಸಿರುವ ಪರಿಶೀಲನೆ ಹಾಗೂ ಜಪ್ತಿಯಿಂದ 71,941 ಕೋಟಿ ಅಘೋಷಿತ ಆದಾಯ ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನೋಟು ಅಪಮೌಲ್ಯೀಕರಣದ ನಂತರ 2016ರ ನವೆಂಬರ್‌ 6ರಿಂದ 2017ರ ಜನವರಿ 10ರ ವರೆಗೂ ₹5,400 ಅಘೋಷಿತ ಆದಾಯ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು 303.367 ಕೆ.ಜಿ. ಚಿನ್ನ ಜಪ್ತಿ ಮಾಡಿರುವುದಾಗಿ ಹಣಕಾಸು ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

ಜಪ್ತಿ ಮಾಡಲಾಗಿರುವ 2890 ಕೋಟಿ ಮೌಲ್ಯದ ಅಘೋಷಿತ ಆಸ್ತಿಯೂ ಒಳಗೊಂಡಿದೆ. 2014ರ ಏಪ್ರಿಲ್‌ 1ರಿಂದ 2017ರ ಫೆಬ್ರುವರಿ 28ರ ವರೆಗೂ ಆದಾಯ ತೆರಿಗೆ ಇಲಾಖೆ ನಡೆಸಿರುವ 15 ಸಾವಿರ ಪರಿಶೀಲನೆಯಲ್ಲಿ 33,000 ಕೋಟಿ ಅಘೋಷಿತ ಆದಾಯ ಪತ್ತೆಯಾಗಿರುವುದಾಗಿ ತಿಳಿಸಿದೆ.
ಈವರೆಗೆ ಒಟ್ಟು 513 ಕೋಟಿ ಮೌಲ್ಯದ ನಗದು ಜಪ್ತಿ ಮಾಡಲಾಗಿದ್ದು, ಇದರಲ್ಲಿ 110 ಕೋಟಿ ಹೊಸ ನೋಟುಗಳನ್ನು ಒಳಗೊಂಡಿದೆ.

ತನಿಖೆ ವೇಳೆ ಸಂಗ್ರಹಿಸಿದ್ದ ಅಘೋಷಿದ ಹಣದ ಮಾಹಿತಿ ತಿರುಚಲು ಪ್ರಯತ್ನಿಸಿರುವ 400 ಪ್ರಕರಣಗಳನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ ಎಂದು ತಿಳಿಸಿದೆ.

No Comments

Leave A Comment