Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ತೆಂಗಿನ ಮರ ಬಿದ್ದು ದೂರದರ್ಶನ ನಿರೂಪಕಿ ಸಾವು

ಮುಂಬೈ: ಮುಂಜಾನೆ ವಾಕಿಂಗ್’ಗೆ ತೆರಳಿದ್ದ ವೇಳೆ ತೆಂಗಿನ ಮರವೊಂದು ಬಿದ್ದು ದೂರದರ್ಶನದ ಮಾಜಿ ವಾರ್ತಾ ನಿರೂಪಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಶನಿವಾರ ನಡೆದಿದೆ.

ದೂರದರ್ಶನದ ಮಾಜಿ ವಾರ್ತಾನಿರೂಪಕಿ ಹಾಗೂ ಯೋಗ ಶಿಕ್ಷಕಿ ಕಾಂಚನ್ ನಾಥ್ (58) ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ತಮ್ಮ ಮನೆಯ ಸಮೀಪ ಮುಂಜಾನೆಯ ವಾಯುವಿಹಾರಕ್ಕೆ ತೆರಳಿದ್ದ ವೇಳೆ ತೆಂಗಿನ ಮರವೊಂದು ಬಿದ್ದು, ಕಾಂಚನ್ ಅವರು ತೀವ್ರವಾಗಿ ಗಾಯಗೊಂಡಿದ್ದರು.

ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಘಟನೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಇದೇ ವೇಳೆ ಘಟನೆಗೆ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಕಾಂಚನ್ ಅವರ ಪತಿ ರಜತ್ ನಾಥ್ ಅವರು ಆರೋಪಿಸಿದ್ದಾರೆ. ತೆಂಗಿನ ಮರ ಯಾವುದೇ ಕ್ಷಣ ಬೀಳಬಹುದು ಎಂದು ದೂರು ನೀಡಿದ್ದರೂ ಮರವನ್ನು ಕರಿಯಲು ಪಾಲಿಕೆ ನಿರಾಕರಿಸಿದ್ದು ಎಂದು ತಿಳಿಸಿದ್ದಾರೆ.

No Comments

Leave A Comment