Log In
BREAKING NEWS >
ನಾಡಿನ ಸಮಸ್ತ ಜನತೆಗೆ,ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ಬಳಗದ ಯುಗಾದಿ ಹಬ್ಬದ ಶುಭಾಶಯಗಳು.......ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಯುದ್ಧ ಆರಂಭವಾದರೆ ಹತ್ತೇ ದಿನದಲ್ಲಿ ಭಾರತದ ಶಸ್ತ್ರಾಸ್ತ್ರ ಖಾಲಿ: ಸಿಎಜಿ ವರದಿ

ನವದೆಹಲಿ: ಅತ್ತ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನ ಮತ್ತು ಚೀನಾ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸಿಕೊಂಡಿರುವಂತೆಯೇ ಇತ್ತ ಭಾರತೀಯ ಸೇನೆಯ ಪರಿಸ್ಥಿತಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ.

ಮಹಾಲೇಖಪಾಲ (ಸಿಎಜಿ) ವರದಿಯನ್ವಯ ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ ಇದ್ದು, ಶೇ.40ರಷ್ಟು ಶಸ್ತ್ರಾಸ್ತ್ರಗಳ ಕೊರತೆ ಇದೆ ಎಂದು ವರದಿ ನೀಡಿದೆ. ಅದರನ್ವಯ ಅಕಸ್ಮಾತ್ ಯುದ್ಧ ನಡೆದರೆ ಕೇವಲ ಹತ್ತೇ  ದಿನದಲ್ಲಿ ಭಾರತದ ಬಳಿ ಇರುವ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತದೆ ಎಂದು ಸಿಎಜಿ ವರದಿ ನೀಡಿದೆ.  ಭಾರತೀಯ ಸೇನೆಯ ಬಳಿ ಇರುವ ಶಸ್ತ್ರಾಸ್ತ್ರಗಳ ಬಗ್ಗೆ ಲೆಕ್ಕ ಪರಿಶೋಧನಾ ಸಮಿತಿ CAG ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ಯುದ್ಧ ನಡೆದರೆ ಭಾರತೀಯ ಸೇನೆಗೆ 152 ವಿಧದ ಶಸ್ತ್ರಾಸ್ತ್ರಗಳು ತುರ್ತಾಗಿ  ಬೇಕಾಗುತ್ತದೆ. ಆದರೆ ಈ ಪೈಕಿ 61 ವಿಧದ ಶಸ್ತ್ರಾಸ್ತ್ರಗಳು ಸತತ 10 ದಿನ ಯುದ್ಧ ನಡೆದರೆ ಖಾಲಿಯಾಗುತ್ತವೆ.

31 ವಿಧದ ಶಸ್ತ್ರಾಸ್ತ್ರಗಳ ದಾಸ್ತಾನು ತೃಪ್ತಿದಾಯಕವಾಗಿದೆಯಾದರೂ ಉಳಿದ 60 ವಿಧದ ಶಸ್ತ್ರಾಸ್ತ್ರಗಳ ಪ್ರಮಾಣ ಕಡಿಮೆ  ಪ್ರಮಾಣದಲ್ಲಿವೆ ಎಂದು ವರದಿಯಲ್ಲಿ ತಿಳಿಸಿದೆ.

ಯಾವುದೇ ಸಂದರ್ಭದಲ್ಲಿ ಯುದ್ಧ ಘೋಷಣೆಯಾದರೆ ಕನಿಷ್ಠ 20 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ಇರಬೇಕು ಎಂಬ ನಿಯಮವಿದ್ದು, ಈ ನಿಯಮ ಪಾಲನೆಯಾಗಿಲ್ಲದಿರುವುದು ಈಗ ಸಿಎಜಿ ವರದಿ ಮೂಲಕ ಬಯಲಾಗಿದೆ.  ಜತೆಗೆ ಸೈನಿಕರ ತರಬೇತಿಗೆಂದು ಕನಿಷ್ಠ 24 ವಿಧದ ಯುದ್ಧ ಸಾಮಗ್ರಿಗಳು ಬೇಕು . ಆದರೆ ಈ ಶಸ್ತ್ರಾಸ್ತ್ರಗಳೂ ಸಹ ಕೇವಲ 5 ದಿನಗಳಿಗೆ ಸಾಕಾಗುವಷ್ಟಿದೆ ಎಂದು ವರದಿ ತಿಳಿಸಿದೆ.

No Comments

Leave A Comment