Log In
BREAKING NEWS >
ಉಡುಪಿಯ ಶ್ರೀಶಿರೂರು ಶ್ರೀಗಳು ಹರಿಪಾದಕ್ಕೆ-ಇನ್ನಿಲ್ಲವಾದರು ಶ್ರೀಗಳು-ಉಡುಪಿಯ ಶ್ರೀಕೃಷ್ಣಮಠ ಹಾಗೂ ಶಿರೂರು ಮಠಕ್ಕೆ ಬಿಗುಭದ್ರತೆ

ಪಶ್ಚಿಮ ಬಂಗಾಳ: ಮಾಟ-ಮಂತ್ರ ಮಾಡಲು ಹೋಗಿ 3 ವರ್ಷದ ಬಾಲಕಿ ಬಲಿ ಪಡೆದ ಮಾಂತ್ರಿಕ!

ಕೋಲ್ಕತಾ: ಮಾಂತ್ರಿಕನೊಬ್ಬ ತನ್ನ ಮಾಟ-ಮಂತ್ರದಿಂದ ಮೂರು ವರ್ಷದ ಬಾಲಕಿ ವೂಡೂ ಗೊಂಬೆ ಮಾಡುವುದಕ್ಕಾಗಿ ಆಕೆಯ ಮೈಗೆ ಏಳು ಸೂಜಿಗಳನ್ನು ಚುಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ನಡೆದಿದೆ.

ಗಾಯಗೊಂಡಿದ್ದ ಪುರುಲಿಯಾ ಮೂಲದ ಬಾಲಕಿಯನ್ನು ಕೋಲ್ಕತಾದ ಎಎಸ್ ಕೆಂಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಬಾಲಕಿಯ ದೇಹದಲ್ಲಿದ್ದ ಎಲ್ಲಾ ಸೂಚಿಗಳನ್ನು ಹೊರತೆಗೆದಿದ್ದಾರೆ. ಆದರೂ ಚೇತರಿಸಿಕೊಳ್ಳದ ಬಾಲಕಿ ಇಂದು ಮಧ್ಯಾಹ್ನ 2.40ರ ಸುಮಾರಿಗೆ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಬಾಲಕಿ ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಬಾಲಕಿಗೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ಹಾಗೂ ಸೂಚಿಯಿಂದ ಚಿತ್ರಹಿಂಸೆ ನೀಡಿದ್ದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಳು ಎಂದು ಆರೋಪಿಸಿದ್ದಾರೆ.

ಬಾಲಕಿಗೆ ಚಿತ್ರ ಹಿಂಸೆ ನೀಡಿದ ಆರೋಪದ ಮೇಲೆ ಮಾಂತ್ರಿಕ, ಮಾಜಿ ಹೋಮ್ ಗಾರ್ಡ್ ವಿರುದ್ಧ ಪೊಲೀಸರು ಪೋಸ್ಕೋ ಕಾಯ್ಡಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ.

No Comments

Leave A Comment