Log In
BREAKING NEWS >
ಸಮಸ್ತ ಓದುಗರಿಗೆ, ನಮಗೆ ಜಾಹೀರಾತು ನೀಡಿ ಸಹಕರಿಸುತ್ತಿರುವ ಎಲ್ಲಾ ಜಾಹೀರಾತುದಾರರಿಗೆ ಮತ್ತು ನಮ್ಮ ಅಭಿಮಾನಿಗಳಿಗೆ "ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ "ಶ್ರೀಗೌರಿ-ಗಣೇಶ "ಹಬ್ಬದ ಶುಭಾಶಯಗಳು

ಮುಖೇಶ್ ಅಂಬಾನಿ ಹೊಸ ಆಫರ್: ಜಿಯೋ 4ಜಿ ಫೋನ್, ಧ್ವನಿ ಕರೆಗಳು ಉಚಿತ!

ಮುಂಬೈ: ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಆಫರ್ ಗಳನ್ನು ಪರಿಚಯಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಮತ್ತೊಂದು ನೂತನ ಆಫರ್ ಘೋಷಿಸಿದ್ದು 500 ರೂಪಾಯಿಗೆ ಸ್ಮಾರ್ಟ್ ಫೋನ್, 1,500 ರೂಪಾಯಿಗಳಿಗೆ 4 ಜಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಮುಂಬೈ ನಲ್ಲಿ ನಡೆದ 40 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಆಡಿದ ಮುಖೇಶ್ ಅಂಬಾನಿ,  500 ರೂಪಾಯಿಗೆ ಸ್ಮಾರ್ಟ್ ಫೋನ್, 1,500 ರೂಪಾಯಿಗೆ ಜಿಯೋ 4 ಜಿ ಫೋನ್ ಬಿಡುಗಡೆಗೊಳಿಸುವುದಾಗಿ ಹೇಳಿದ್ದು, ಈ ಮೊತ್ತ ಗ್ರಾಹಕರಿಗೆ ರೀಫಂಡ್ ಮಾಡಲಾಗುತ್ತದೆ ಎಂದೂ ಘೋಷಿಸಿದ್ದಾರೆ.

ರಿಲಾಯನ್ಸ್ ಸಂಸ್ಥೆ ಬಿಡುಗಡೆ ಮಾಡಲು ಸಿದ್ಧವಾಗಿರುವ ಸ್ಮಾರ್ಟ್ ಫೋನ್ ಹಾಗೂ ಫೋನ್ ಗಳು ಭಾರತದಲ್ಲೇ ತಯಾರಾಗಲಿದ್ದು, ಮೇಡ್ ಇನ್ ಇಂಡಿಯಾ ಆಗಿರಲಿವೆ,. ಇದಕ್ಕಾಗಿ ಭಾರತದ ಮೊಬೈಲ್ ತಯಾರಕ ಸಂಸ್ಥೆಯಾದ ಇಂಟೆಕ್ಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ರಿಲಾಯನ್ಸ್ ಜಿಯೋ ಮೊಬೈಲ್ ನಲ್ಲಿ ಧ್ವನಿ ಕರೆಗಳು ಸಂಪೂರ್ಣ ಉಚಿತವಾಗಿರಲಿದ್ದು, ಆಕರ್ಷಕ ಡಾಟಾ ಪ್ಲಾನ್ ಗಳನ್ನೂ ನೀಡಲಾಗಿದೆ. ಎಲ್ಲರಿಗೂ ಕೈಗೆಟುಕುವ ದರದಲ್ಲಿ ಅಂದರೆ ತಿಂಗಳಿಗೆ ಕೇವಲ 153 ರೂಪಾಯಿಗಳನ್ನು ನೀಡಿದರೆ ಡಾಟಾ ಪ್ಲಾನ್ ಲಭ್ಯವಿದ್ದು, 2 ದಿನಗಳಿಗೆ 24 ರೂಪಾಯಿ, 53 ರೂಪಾಯಿಗೆ ಒಂದು ವಾರ ಡಾಟಾ ಪಡೆಯಬಹುದಾಗಿದೆ.

ಆಗಸ್ಟ್ 24 ರಿಂದ ಜಿಯೋ ಫೋನ್ ಗಳಿಗೆ ಬುಕ್ಕಿಂಗ್ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ ವೇಳೆಗೆ ಗ್ರಾಹಕರ ಕೈ ಸೇರಲಿದೆ.

No Comments

Leave A Comment