Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕೊಡಗಿನಲ್ಲಿ ಕುಂಭದ್ರೋಣ ಮಳೆ;ಶಾಲಾ ಕಾಲೇಜುಗಳಿಗೆ ರಜೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ,ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಂಭದ್ರೋಣ ಮಳೆ ಹಿನ್ನಲೆಯಲ್ಲಿ ಗುರುವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಅವರು ರಜೆ ಘೋಷಿಸಿದ್ದಾರೆ.

ಜಿಲ್ಲೆ ಯಲ್ಲಿ ಸೋಮವಾರದಿಂದ ಭಾರೀ ಗಾಳಿ – ಮಳೆಯಾಗುತ್ತಿದ್ದು,ಜೀವನದಿ ಕಾವೇರಿಯ ಒಡಲು ಮತ್ತೆ ತುಂಬಲಾರಂಭಿಸಿದೆ.ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ರಸ್ತೆ ಜಲಾವೃತಗೊಂಡಿದೆ.

 ಭಾಗಮಂಡಲದ ಮಡಿಕೇರಿ ಮತ್ತು ಅಯ್ಯಂಗೇರಿ ರಸ್ತೆಗಳು ಜಲಾವೃತಗೊಳ್ಳುವ ಸಾಧ್ಯತೆ ಗಳಿವೆ. ಸೋಮವಾರ ಸಂಜೆ ಯಿಂದ ಆರಂಭ ಗೊಂಡಿ ರುವ ಮಳೆ ಮಂಗಳ  ವಾರವೂ ಮುಂದುವರಿದಿದ್ದು, ಭಾಗ  ಮಂಡಲ ಸುತ್ತಮುತ್ತಲ ಶಾಲೆಗಳಿಗೆ ಮಂಗಳವಾರ ಮಧ್ಯಾಹ್ನದ ಬಳಿಕ ರಜೆ ಘೋಷಿಸಲಾಗಿತ್ತು.

No Comments

Leave A Comment