Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ತೆಲುಗು ಚಿತ್ರರಂಗದ ಪ್ರಮುಖರ ವಿಚಾರಣೆ ಡ್ರಗ್‌ ಮಾಫಿಯಾ: ಎಸ್‌ಐಟಿ ಮುಂದೆ ನಿರ್ದೇಶಕ ಪುರಿ ಜಗನ್ನಾಥ್‌

ಹೈದರಾಬಾದ್‌: ಕನ್ನಡದ ಅಪ್ಪು, ಯುವರಾಜ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ವಿಚಾರಣೆಗಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಮುಂದೆ ಹಾಜರಾಗಿದ್ದಾರೆ.

ಡ್ರಗ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಪುರಿ ಜಗನ್ನಾಥ್‌ ಸೇರಿದಂತೆ ಚಿತ್ರರಂಗದ ಅನೇಕ ಪ್ರಸಿದ್ಧ ನಟ–ನಟಿಯರಿಗೂ ನೋಟಿಸ್‌ ನೀಡಿದೆ.

ಹೈದರಾಬಾದ್‌ನಲ್ಲಿ ಡ್ರಗ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ವ್ಯಕ್ತಿಯ ಸಂಪರ್ಕದಲ್ಲಿದ್ದ ಚಿತ್ರರಂಗದ ಅನೇಕರಿಗೆ ನೋಟಿಸ್‌ ನೀಡಿದ್ದು, ಬುಧವಾರ ಪುರಿ ಜಗನ್ನಾಥ್‌ ವಿಚಾರಣೆಗೆ ಹಾಜರಾದರು.

ನಟಿ ಚಾರ್ಮಿ ಕೌರ್‌ ಹಾಗೂ ಮುಮೈತ್‌ ಖಾನ್‌ ಅವರಿಗೆ ಇದೇ 20, 21ರಂದು ಎಸ್‌ಐಟಿ ಮುಂದೆ ಹಾಜರಾಗಲು ಸೂಚಿಸಲಾಗಿದೆ. ಬಂಧಿಸಲಾಗಿರುವ ಮಾದಕ ವಸ್ತು ಮಾರಾಟಗಾರರೊಂದಿಗೆ ಸಂಪರ್ಕ ಇರುವ ಚಿತ್ರರಂಗದ ಬಹಳಷ್ಟು ಕಲಾವಿದರನ್ನು ಪ್ರಶ್ನಿಸಲಾಗುತ್ತಿದೆ.

ತೆಲುಗು ಚಿತ್ರರಂಗದ ನಟ ರವಿತೇಜ, ನವ್‌ದೀಪ್‌, ತರುಣ್‌, ಸುಬ್ಬರಾಜು, ನಂದು, ಛಾಯಾಗ್ರಾಹಕ ಶ್ಯಾಮ್‌ ಕೆ ನಾಯ್ಡು ಹಾಗೂ ನಿರ್ದೇಶಕ ಚಿನ್ನ ಅವರನ್ನೂ ಎಸ್‌ಐಟಿ ಪ್ರಶ್ನಿಸಲು ನೋಟಿಸ್‌ ನೀಡಿದೆ.

ಶಾಲಾ–ಕಾಲೇಜುಗಳಿಗೆ ಸರಬರಾಜು: ನಗರದ ಖಾಸಗಿ ಶಾಲಾ–ಕಾಲೇಜುಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡ್ರಗ್‌ ವ್ಯಸನಿಗಳಾಗಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ನಾಸಾದಲ್ಲಿ ಕಾರ್ಯನಿರ್ವಹಿಸಿದ್ದ ಏರೋಸ್ಪೇಸ್‌ ಎಂಜಿನಿಯರ್‌ , ಏಳು ಜನ ಬಿ.ಟೆಕ್‌ ಪದವೀಧರರು ಹಾಗೂ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 13 ಜನ ಆರೋಪಿಗಳನ್ನು ಡ್ರಗ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈವರೆಗೆ ಬಂಧಿಸಿದೆ.

No Comments

Leave A Comment