Log In
BREAKING NEWS >
ಸಮಸ್ತ ಓದುಗರಿಗೆ, ನಮಗೆ ಜಾಹೀರಾತು ನೀಡಿ ಸಹಕರಿಸುತ್ತಿರುವ ಎಲ್ಲಾ ಜಾಹೀರಾತುದಾರರಿಗೆ ಮತ್ತು ನಮ್ಮ ಅಭಿಮಾನಿಗಳಿಗೆ "ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ "ಶ್ರೀಗೌರಿ-ಗಣೇಶ "ಹಬ್ಬದ ಶುಭಾಶಯಗಳು

ಸತ್ತವರ ಪಟ್ಟಿಯಲ್ಲಿ ಜೀವಂತವಿದ್ದವನ ಹೆಸರು; ಶೋಭಾ ಮಾಡಿದ್ದೇನು?

ಹೊಸದಿಲ್ಲಿ : ರಾಜ್ಯದಲ್ಲಿ ಹತ್ಯೆಗೀಡಾದ ಸಂಘಪರಿವಾರದ ಕಾರ್ಯಕರ್ತರು  ಮತ್ತು ಬಿಜೆಪಿ ಮುಖಂಡರ ಹೆಸರಿನ ಪಟ್ಟಿ ಸಮೇತ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ಅಚಾತುರ್ಯವೊಂದು ನಡೆದಿದ್ದು ಜೀವಂತವಿರುವ ವ್ಯಕ್ತಿಯನ್ನೂ ಮೃತಪಟ್ಟಿರುವುದಾಗಿ ಉಲ್ಲೇಖೀಸಲಾಗಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ನಡೆದ ಸಂಘಪರಿವಾರದ 23 ಕಾರ್ಯಕರ್ತರ ಹತ್ಯೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು . ಶರತ್‌ ಮಡಿವಾಳ ಹತ್ಯೆ ಪ್ರಕರಣವನ್ನು ಎನ್‌ಐಗೆ ನೀಡಬೇಕು ಎಂದು ಪತ್ರ ಬರೆಯಲಾಗಿತ್ತು.

2015 ರಸೆಪ್ಟಂಬರ್‌ 20 ರಂದು ಮೂಡಬಿದಿರೆಯ ಹಂಡೇಲುವಿನಲ್ಲಿ ಅಶೋಕ್‌ ಪೂಜಾರಿ  ಎಂಬ ಸಂಘಪರಿವಾರದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆಸ್ಪತ್ರೆಗೆ ದಾಖಲಾಗಿದ್ದು ಅಶೋಕ್‌ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಅಶೋಕ್‌ ಪೂಜಾರಿ ಅವರ ಹೆಸರನ್ನೆ ಪತ್ರದ ಮೊದಲ ಸಾಲಿನಲ್ಲಿ ಉಲ್ಲೇಖೀಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ಪಟ್ಟಿಯಲ್ಲಿ ಗೊಂದಲವಾಗಿದೆ. ಹಲ್ಲೆಗೊಳಗಾದ ಹೆಸರುಗಳನ್ನು ಸೇರಿಸಿ ಇನ್ನೊಂದು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

No Comments

Leave A Comment