Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ 72ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಥೂ ನಿಮ್ಮ…ಬೆತ್ತಲೆ ದೃಶ್ಯದ ವಿರುದ್ಧ ಹುಚ್ಚ ವೆಂಕಟ್‌ ಕೆಂಡಾಮಂಡಲ

ಬೆಂಗಳೂರು: ಪಾರ್ಟ್‌ 2 ಚಿತ್ರದ ಸೆನ್ಸಾರ್‌ನಿಂದ ಕತ್ತರಿಸಲ್ಪಟ್ಟ ಬೆತ್ತಲೆ ವೈರಲ್‌ ದೃಶ್ಯದ ವಿರುದ್ಧ ನಟ, ನಿರ್ದೇಶಕ ಹುಚ್ಚ ವೆಂಕಟ್‌ ಕೆಂಡಾಮಂಡಲವಾಗಿದ್ದಾರೆ.

ಹುಚ್ಚ ವೆಂಕಟ್‌ ಆಫಿಷಿಯಲ್‌ ಯೂಟ್ಯೂಬ್‌ ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು ಎಂದಿನಂತೆ ತಮ್ಮ ಶೈಲಿಯಲ್ಲಿ ಮಹಿಳೆಯರ ಪರ ಧ್ವನಿಯಾಗಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ತೀರಾ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿರ್ದೇಶಕರನ್ನು ಬೈದಿದ್ದು, ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವಾ? ನಿಮ್ಮ ಮನೆಯಲ್ಲಿ ತಾಯಿ , ಹೆಂಡತಿ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೂ ಥೂ ನಿಮ್ಮ…ನನ್‌ ಯಕ್ಕಡಾ ಎಂದು ಬೈದಿದ್ದಾರೆ. ಒಳ್ಳೆ ಚಿತ್ರ ಸೋಲಿಸ್ತೀರಾ ಇಂತಹಾ ಕಚಡಾ ನನ್‌ ಮಕ್ಳ ಚಿತ್ರ ನೋಡ್ತೀರಾ ..ಥೂ ಎಂದು ಉಗಿದಿದ್ದಾರೆ. ಇದು ಚೀಪ್‌ ಪಬ್ಲಿಸಿಟಿ ಗಿಮಿಕ್‌ ಎಂದು ವೆಂಕಟ್‌ ಹೇಳಿದ್ದಾರೆ.

ನಟಿ ಸಂಜನಾ ಅಭಿನಯಿಸಿದ್ದ ಸಂಪೂರ್ಣ ಬೆತ್ತಲು ದೃಶ್ಯ ವೈರಲ್‌ ಆಗಿತ್ತು.

No Comments

Leave A Comment