Log In
BREAKING NEWS >
ಗೋಶಾಲೆಯಲ್ಲಿ 200 ಹಸುಗಳ ಸಾವು ಪ್ರಕರಣ: ಬಿಜೆಪಿ ಮುಖಂಡ ಬಂಧನ....ಉಗ್ರರು ಒಳ ನಸುಳಿರುವ ಶಂಕೆ: ಶೋಪಿಯಾನ್ ಜಿಲ್ಲೆಯ 9 ಗ್ರಾಮಗಳಲ್ಲಿ ತೀವ್ರ ಸೇನಾ ಶೋಧ....

ಡಿಐಜಿ ರೂಪಾ ಸೇರಿ 5ಐಪಿಎಸ್ ಅಧಿಕಾರಿಗಳ ವರ್ಗಾವಣೆ!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಾಹರಗಳ ಬಗ್ಗೆ ವರದಿ ಸಲ್ಲಿಸಿದ್ದ ಬಂಧಿಖಾನೆ ಡಿಐಜಿ ಡಿ.ರೂಪಾ ಮತ್ತು ಡಿಜಿಪಿ ಸತ್ಯನಾರಾಯಣರಾವ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಾರಿಗೆ ಸಂಚಾರ ಮತ್ತು ಸುರಕ್ಷತಾ ವಿಭಾಗದ ಐಜಿಪಿ ಆಗಿ ರೂಪಾ ಅವರನ್ನು ವರ್ಗಾವಣೆ ಮಾಡಲಾಗಿದೆ. ರೂಪಾ ಜೊತೆಗೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇನ್ನೂ ಬಂಧೀಖಾನೆ ಡಿಜಿಪಿ ಸತ್ಯನಾರಾಯಣರಾವ್ ಅವರನ್ನು ಸರ್ಕಾರ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದೆ, ಇನ್ನು ಕೆಲವೇ ದಿನಗಳಲ್ಲಿ ನಿವೃತ್ತರಾಗುತ್ತಿದ್ದ ಸತ್ಯನಾರಾಯಣ ರಾವ್ ಅವರಿಗೆ ಸೂಕ್ತ ಸ್ಥಳ ಒದಗಿಸದೇ ಸರ್ಕಾರ ಆದೇಶ ಹೊರಡಿಸಿದೆ.

ಎಂ.ಎನ್ ರೆಡ್ಡಿ, ಭ್ರಷ್ಟಾಚಾರ ನಿಗ್ರಹ ದಳ ಡಿಜಿಪಿಯಾಗಿ, ಎನ್ ಮೆಘರಿಕ್ ಅವರನ್ನು ಎಡಿಜಿಪಿ ಬೆಂಗಳೂರು ಕಾರಾಗೃಹ, ಎ ಎಸ್ ಎನ್ ಮೂರ್ತಿ- ಅರಣ್ಯ ವಿಭಾಗ, ಎಡಿಜಿಪಿ. ಅಮೃತ್ ಪೌಲ್- ಡಿಜಿಪಿ ಗುಪ್ತಚರ ವಿಭಾಗಕ್ಕೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

No Comments

Leave A Comment