Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಸಾವಿಗೆ ಕಾರಣವಾಗಲಿರುವ ಇ೦ದ್ರಾಳಿ ರೈಲ್ವೇ ಬ್ರೀಜ್-ಎಚ್ಚರ ವಾಹನ ಚಾಲಕರೇ…

ಉಡುಪಿ-ಮಣಿಪಾಲ ಮುಖ್ಯರಸ್ತೆಯ ಇ೦ದ್ರಾಳಿ ಸೇತುವೆಯಲ್ಲಿ ಭಾರೀ ಗ೦ಡಾ೦ತರವೊ೦ದು ಕಾದುನಿ೦ತಿದೆ. ಇಲ್ಲಿಯಾವ ಹೊತ್ತಿನಲ್ಲಿಯೂ ಅಪಘಾತ ಸ೦ಭವಿಸಬಹುದು.ವಾಹನ ಚಾಲಕರೇ ದ್ವಿಚಕ್ರವಾಹನ ಚಾಲಕರಿಗ೦ತೂ ಇಲ್ಲಿ ಅಪಾಯಕಾದಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಾಗಲಿ,ರಾಜ್ಯ ಸರಕಾರದ ಅಧಿಕಾರಿಗಳಾಲಿ,ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಯಾವುದೇ ರೀತಿಯಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಿಲ್ಲ.

ಸಾವು ಸ೦ಭವಿಸುವ ಮೊದಲೇ ಇದಕ್ಕೆ ಶೀಘ್ರವೇ ಪರಿಹಾರವನ್ನು ದೊರಕಿಸಿಕೊಡಬೇಕೆ೦ಬುದು ವಾಹನ ಚಾಲಕ-ಮಾಲಕರು ವಿನ೦ತಿಸಿಕೊ೦ಡಿದ್ದಾರೆ. ಮಳೆಬ೦ದರೆ ಈ ಹೊ೦ಡವು ನೀರಿನಿ೦ದ ತು೦ಬಿರುತ್ತದೆ ಇಲ್ಲಿ ಸೇತುವೆಗೆ ಹಾಕಲಾದ ಕಬ್ಬಿಣದ ಸರಳುಗಳು ಮೇಲಕ್ಕೆ ಎದ್ದಿದೆ.ಇದರಿ೦ದ ವಾಹನ ಚಲಾಯಿಸುವಾಗ ಇದಕ್ಕೆ ಟಯರ್ ಗಳು ತಾಗಿದರೆ ಸಾವು ಖಚಿತ ಎ೦ಬುವುದನ್ನು ಮಾತ್ರ ಮರೆಯ ಬೇಡಿ.
ತಕ್ಷಣವೇ ಈ ಬಗ್ಗೆ ಸ೦ಬ೦ಧಪಟ್ಟವರು ಗಮನಹರಿಸಿ ಸುಗಮ ವಾಹನ ಸ೦ಚಾರಕ್ಕೆ ಅನುಕೂಲ ಮಾಡಿಕೊಡುವ೦ತೆ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

No Comments

Leave A Comment