Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಭಾರತದ ಸಾಗರದಾಳದಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಪತ್ತೆ!

ಕೋಲ್ಕತ್ತಾ: ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಭಾರತದ ಸಾಗರಾಳದಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಮಂಗಳೂರು, ಚೆನ್ನೈ, ಮನ್ನಾರ್ ಜಲಾನಯನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಮತ್ತು ಲಕ್ಷದ್ವೀಪದ ಸುತ್ತಲೂ ಸಮುದ್ರ ಸಂಪನ್ಮೂಲಗಳ ಇರುವಿಕೆ 2014 ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು.

ಫಾಸ್ಫೇಟ್, ಹೈಡ್ರೋಕಾರ್ಬನ್ ಗಳು, ಮೆಟಾಲಿಫರಸ್ ನಿಕ್ಷೇಪಗಳು ಸೇರಿದಂತೆ ಅಪಾರ ಪ್ರಮಾಣದ ಖನಿಜ ಸಂಪತ್ತು ಸಮುದ್ರದಾಳದಲ್ಲಿ ಪತ್ತೆಯಾಗಿದ್ದು, ಆಳಕ್ಕೆ ಹೋದಷ್ಟೂ ಮತ್ತಷ್ಟು ಸಂಪನ್ಮೂಲಗಳು ಪತ್ತೆಯಾಗಲಿವೆ ಎಂದು  ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಇದಕ್ಕೆ ಸಂಬಂಧಿಸಿದಂತೆ ಅಧ್ಯಯನ, ಸಂಶೋಧನೆಗಳು ನಡೆಯುತ್ತಿದ್ದು, ಭಾರತದ ವಿಶೇಷ ಆರ್ಥಿಕ ವಲಯದ ವ್ಯಾಪ್ತಿಯಲ್ಲಿ 10,000 ಮಿಲಿಯನ್ ಟನ್ ಗಿಂತಲೂ ಹೆಚ್ಚು ಪ್ರಮಾಣದ ಪ್ರದೇಶದಲ್ಲಿ ಲೈಮ್ ಮಡ್ ಇರುವಿಕೆಯನ್ನು ಪತ್ತೆ ಮಾಡಿದ್ದಾರೆ.

ಇನ್ನು ಕಾರ್ವಾರ, ಮಂಗಳೂರು, ಚೆನ್ನೈ ಪ್ರದೇಶಗಳಲ್ಲಿ ಫಾಸ್ಫೇಟ್ ಸೆಡಿಮೆಂಟ್, ಅಂಡಮಾನ್ ಸಮುದ್ರದಲ್ಲಿ ಫೆರೊಮ್ಯಾಂಗನೀಸ್ ಕ್ರಸ್ಟ್ ಸೇರಿದಂತೆ ಮೌಲ್ಯಯುತ ಖನಿಜ ಸಂಪತ್ತು ಪತ್ತೆಯಾಗಿದೆ ಎಂದು ಜಿಎಸ್ ಐ ತಿಳಿಸಿದೆ.

No Comments

Leave A Comment