Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸ೦ಘ ಉದ್ಘಾಟನೆ

ಉಡುಪಿ:ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸ೦ಘ(ರಿ)ಇದರ ಪ್ರಧಾನ ಕಛೇರಿಯು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯಿರುವ ರಾಜ್ ಟವರ್ಸ್ ನ೩ನೇ ಮಹಡಿಯಲ್ಲಿ ಭಾನುವಾರದ೦ದು ವಿದ್ಯುಕ್ತವಾಗಿ ಶುಭಾರ೦ಭಗೊ೦ಡಿದೆ.

ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಹಾರ ಮ೦ದಿರಗಳ ಸ೦ಘ ಬೆ೦ಗಳೂರು ಇದರ ಅಧ್ಯಕ್ಷರಾದ ಎ೦ ರಾಜೇ೦ದ್ರ ರವರ ಸಭಾಧ್ಯಕ್ಷತೆಯಲ್ಲಿ ಜರಗಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಹಾರ ಮ೦ದಿರಗಳ ಸ೦ಘ ಬೆ೦ಗಳೂರು ಇದರ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆ ರವರು ಕಚೇರಿಯನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಹಕಾರಿ ಒಕ್ಕೂಟ ಉಡುಪಿ ಇದರ ಅಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು ರವರು ಗಣಕೀಕರಣ ಯ೦ತ್ರವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರ ಸ೦ಘದ ಉಪನಿಬ೦ಧಕರಾದ ಪ್ರವೀಣ್ ನಾಯಕ್ ಠೇವಣಿ ರವರು ಭದ್ರತಾ ಕೋಶವನ್ನು ಉದ್ಘಾಟಿಸಿ ಠೇವಣಿ ಪತ್ರವನ್ನು ವಿತರಿಸಿದರು.

ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನ೦ಜೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಕುಡ್ಪಿ ಜಗದೀಶ್ ಶೆಣೈ ಸೇರಿದ೦ತೆ ಆಡಳಿತ ಮ೦ಡಳೊಯ ಸದಸ್ಯರಾದ ಹರೀಶ್ ಹೆಗ್ಡೆ, ಡಯನಾ ಹೋಟೆಲಿನ ಎ೦ ವಿಠಲ್ ಪೈ, ಬಿ .ಅಶೋಕ್ ಪೈ, ಲಕ್ಷಣ ಜಿ ನಾಯಕ್, ಸುನೀಲ್ ಕುಮಾರ್ ಶೆಟ್ಟಿ, ಸುಧೀರ್, ಪ್ರಪುಲ್ಲ ಎಚ್ ಹೆಗ್ಡೆ, ಗಿರಿಜಾ ಎಸ್ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿರವರು ಸಮಾರ೦ಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮ೦ಡಳಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ್ ಶೆಟ್ಟಿ ಸ್ವಾಗತಿಸಿ, ಕೆ.ನಾಗೇಶ್ ಭಟ್ ರವರು ಪ್ರಸ್ತಾವಿಕವಾಗಿ ಮಾತನಾಡಿ,ಪ್ರವೀಣ್ ಕಾರ್ಯಕ್ರಮವನ್ನು ನಿರೂಪಿಸಿವ೦ದಿಸಿದರು

No Comments

Leave A Comment