Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಉಡುಪಿ ಸಂತೆಕಟ್ಟೆ: ರಿಕ್ಷಾಕ್ಕೆ ಲಾರಿ ಢಿಕ್ಕಿ ; ಪಾದಚಾರಿಗೆ ಗಾಯ

ಉಡುಪಿ: ರಿಕ್ಷಾಕ್ಕೆ ಲಾರಿ ಢಿಕ್ಕಿಯಾಗಿ ರಿಕ್ಷಾ ಮಗುಚಿಬಿದ್ದ ಪರಿಣಾಮ ಚಾಲಕ ಹಾಗೂ ಪಾದಚಾರಿ ಗಾಯಗೊಂಡ ಘಟನೆ ರಾ. ಹೆ. 66 ರ ಉಡುಪಿ ಸಂತೆಕಟ್ಟೆ ಬಳಿ ಗುರುವಾರ ಬೆಳಗ್ಗಿನ ಜಾವ ಸಂಭವಿಸಿದೆ.

ನಾರಾಯಣ ಕೆ. ರಿಕ್ಷಾ ಚಲಾಯಸಿಕೊಂಡು ಕೆಮ್ಮಣ್ಣವಿನಿಂದ ಉಡುಪಿ ಸರ್ವಿಸ್‌ ನಿಲ್ದಾಣಕ್ಕೆ ಹೊರಟ್ಟಿದ್ದು, ರಾ. ಹೆ. 66 ರ ಸಂತೆಕಟ್ಟೆ ಆಶೀರ್ವಾದ ರೋಬೋಸಾಪ್ಟ್ ಕಚೇರಿ ಎದುರು ಚಾಲಕ ಭೋಜಪ್ಪ ಅವರು ಚಲಾಯಿಸುತ್ತಿದ್ದ ಲಾರಿ ಹಿಂದಿನಿಂದ ಢಿಕ್ಕಿ ಹೊಡೆದಿದೆ.

ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ.  ಪರಿಣಾಮ ರಿಕ್ಷಾ  ಮಗುಚಿಬಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಾಸ್ಕರ ಕರ್ಕೇರ ಬಡಿದು ಹಣೆ, ಬಲತುಟಿ, ಬಲಕಾಲು ಹಾಗೂ ರಿಕ್ಷಾ ಚಾಲಕ ನಾರಾಯಣ ಕುತ್ತಿಗೆ ಹಿಂಬದಿ, ಬೆನ್ನಿಗೆ ಗಾಯವಾಗಿದೆ.  ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

No Comments

Leave A Comment