Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ತ್ರಾಲ್‌ನಲ್ಲಿ ಗುಂಡಿನ ಕಾಳಗ: ಎನ್‌ಕೌಂಟರ್‌ನಲ್ಲಿ ಉಗ್ರರಿಬ್ಬರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ತ್ರಾಲ್‌ ಪ್ರದೇಶದ ಸತೋರಾ ಎಂಬಲ್ಲಿ ಶುಕ್ರವಾರ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ.

ಉಗ್ರರ ಇರುವಿಕೆಯ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಸೇನಾ ಪಡೆಗಳು ಇಬ್ಬರನ್ನು ಹತ್ಯೆಗೈದು ಕಾರ್ಯಾಚರಣೆ ಮುಂದುವರೆಸಿವೆ. ಇನ್ನೂ ಕೆಲ ಉಗ್ರರು ಅಡಗಿರುವ ಬಗ್ಗೆ ವರದಿಯಾಗಿದೆ.

ಇದೇ ಉಗ್ರರು ಜೂನ್‌ 9 ರಂದು ತ್ರಾಲ್‌ನ  ಅರಿಬಾಲ್‌ನ ಸಿಆರ್‌ಪಿಎಫ್ ಕ್ಯಾಂಪ್‌ಗೆ ಗ್ರೆನೇಡ್‌ ಎಸೆದಿದ್ದರು ಎನ್ನಲಾಗಿದೆ. ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಜವಾನ ಗಾಯಗೊಂಡಿದ್ದ.

ಪ್ರಸಕ್ತ ವರ್ಷ ಸೇನಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಕಾಶ್ಮೀರದಲ್ಲಿ 102 ಉಗ್ರರನ್ನು ಹತ್ಯೆಗೈದಿರುವ ಅಂಕಿ ಅಂಶ ಲಭ್ಯವಾಗಿದೆ.

No Comments

Leave A Comment