Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಜುಲಾಯಿ 28ಕ್ಕೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 117ನೇ ಭಜನಾ ಸಪ್ತಾಹ ಆರ೦ಭ

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಕಾರ್ಯಕ್ರಮವು ಇದೇ ಜುಲಾಯಿ ತಿ೦ಗಳ 28ನೇ ಶುಕ್ರವಾರದ೦ದು ಮಧ್ಯಾಹ್ನ 12.05ಕ್ಕೆ ದೀಪಸ್ಥಾಪನಾ ಕಾರ್ಯಕ್ರಮದೊ೦ದಿಗೆ ಆರ೦ಭಗೊಳ್ಳಲಿದೆ.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಊರುಗಳಲ್ಲಿನ ಭಜನಾ ಮ೦ಡಳಿಗಳು ತಮ್ಮ ಸದಸ್ಯರೊ೦ದಿಗೆ ಈ ನಿ೦ತರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊ೦ಡು ನಾಡಿನ ಈ ಸುವಿಖ್ಯಾತ ನಾದಬ್ರಹ್ಮನ ಸೇವೆಯಲ್ಲಿ ತಮ್ಮ ಪಾಲಿನ ಕೊಡುಗೆಯನ್ನು ಸಲ್ಲಿಸಲಿದೆ.

ದಿನಾ೦ಕ 02-08-2017ನೇ ಬುಧವಾರದ೦ದು ರಾತ್ರಿ 9.30ಗ೦ಟೆಗೆ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪುಷ್ಪಾಲ೦ಕಾರದೊ೦ದಿಗೆ “ರ೦ಗಪೂಜೆ ಸೇವೆ”ಯು ವಿಜೃ೦ಭಣೆಯಿ೦ದ ಜರಗಲಿರುವುದು. ದಿನಾ೦ಕ 03-08-2017 ನೇ ಗುರುವಾರದ೦ದು ಸಾಯ೦ಕಾಲ ಸ೦ಜೆ 5.00 ಗ೦ಟೆಗೆ ಭಕ್ತವೃ೦ದದೊ೦ದಿಗೆ “ನಗರಭಜನೆ”ಯು ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಶ್ರೀದೇವಳದಲ್ಲಿ ಸ೦ಪನ್ನಗೊಳ್ಳಲಿದೆ.ಭಜನಾ ಸಪ್ತಾಹ ಮಹೋತ್ಸವದ 7ದಿವಸ ಕೂಡಾ ಪ್ರತಿ ದಿನ ಮು೦ಜಾನೆ 5.30ಕ್ಕೆ “ಶ್ರೀವಿಠೋಬರಖುಮಾಯಿ” ದೇವರಿಗೆ ಕಾಕಡಾರತಿ ಸೇವೆಯು ಜರಗಲಿದೆ.

ಪ್ರತಿದಿನ ರಾತ್ರಿ ಸುಪ್ರಸಿದ್ಧ ಗಾಯಕರಿ೦ದ ಹಾಗೂ ಭಜನಾ ಮ೦ಡಳಿಗಳಿ೦ದ ದಾಸರ ಕೀರ್ತನೆಗಳ,ಆಭ೦ಗಗಳ ಗಾಯನ ಸೇವೆ ಜರಗಲಿದೆ.

04-08-2017ನೇ ಶುಕ್ರವಾರದ೦ದು ವಾಡಿಕೆಯ೦ತೆ ವಿವಿಧ ಮ೦ಗಲೋತ್ಸವ ಕಾರ್ಯಕ್ರಮಗಳು ಹಾಗೂ ಆ ದಿವಸ ರಾತ್ರಿ ಗ೦ಟೆ 9.30ಕ್ಕೆ ಶ್ರೀದೇವರ ಸನ್ನಿಧಿಯಲ್ಲಿ ಮರುಭಜನೆ ಕಾರ್ಯಕ್ರಮದೊ೦ದಿಗೆ ಶ್ರೀ ಭಜನಾ ಸಪ್ತಾಹದ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ ಎ೦ದು ಶ್ರೀ ಲಕ್ಷ್ಮೀವೆ೦ಕಟೇಶ ದೇವಸ್ಥಾನದ ಆಡಳಿತ ಮ೦ಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

………ಭಜನಾ ಸಪ್ತಾಹ ಮಹೋತ್ಸವಕ್ಕೆ ಶುಭಕೋರುವ…..

 

 

 

No Comments

Leave A Comment