Log In
BREAKING NEWS >
ನಾಡಿನ ಸಮಸ್ತ ಜನತೆಗೆ,ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ಬಳಗದ ಯುಗಾದಿ ಹಬ್ಬದ ಶುಭಾಶಯಗಳು.......ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ವಿರಾಟ್‌ ಪಡೆಗೆ ಹಲವು ಸವಾಲು 2019ರ ವಿಶ್ವಕಪ್‌ವರೆಗೆ ಟೀಂ ಇಂಡಿಯಾ ಆಡಲಿರುವ ಪಂದ್ಯಾವಳಿ ವೇಳಾಪಟ್ಟಿ

ಮುಂಬೈ: 2019ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯವರೆಗೂ ಟೀಂ ಇಂಡಿಯಾ ಆಡಲಿರುವ ಸರಣಿಗಳ ವೇಳಾಪಟ್ಟಿ ಪ್ರಕಟಗೊಂಡಿದೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಆಯ್ಕೆ ಮಾಡಿದ್ದು, 2019ರ ವಿಶ್ವಕಪ್ ಪಂದ್ಯಾವಳಿವರೆಗೂ ರವಿಶಾಸ್ತ್ರಿ ಅವರು ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂಬರುವ ಶ್ರೀಲಂಕಾ ಪ್ರವಾಸದಿಂದ ರವಿಶಾಸ್ತ್ರಿ ಕೋಚ್ ಆಗಿ ಕಾರ್ಯಾರಂಭ ಮಾಡಲಿದ್ದಾರೆ.

ಜತೆಗೆ, ಬೌಲಿಂಗ್‌ ಕೋಚ್‌ ಆಗಿ ಜಹೀರ್‌ ಖಾನ್‌ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅವರನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಇವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 2019ರ ವಿಶ್ವಕಪ್‌ ಟೂರ್ನಿಯವರೆಗೂ ಹಲವು ಸರಣಿಗಳನ್ನು ಆಡಲಿದೆ.

ಮುಂದಿನ 2 ವರ್ಷ ಟೀಂ ಇಂಡಿಯಾ ಆಡಲಿರುವ ಸರಣಿಗಳು

* ಟೀಂ ಇಂಡಿಯಾ ಜುಲೈ 26ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ 3 ಟೆಸ್ಟ್‌, 5 ಏಕದಿನ, 1 ಟಿ– 20 ಪಂದ್ಯಗಳನ್ನು ಆಡಲಿದೆ.

* 2017ರ ಅಕ್ಟೋಬರ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಹಾಗೂ 1 ಟಿ–20 ಪಂದ್ಯ ಆಡಲಿದೆ.

*  2018ರ ಜನವರಿ –ಪೆಬ್ರವರಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ದ.ಆಫ್ರಿಕಾ ವಿರುದ್ಧ 4 ಟೆಸ್ಟ್‌, 5 ಏಕದಿನ ಹಾಗೂ 2 ಟಿ–20 ಪಂದ್ಯಗಳನ್ನು ಆಡಲಿದೆ.

* 2018ರ ಮಾರ್ಚ್‌– ಏಪ್ರಿಲ್‌ನಲ್ಲಿ ಶ್ರೀಲಂಕಾ ವಿರುದ್ಧ 3 ಟೆಸ್ಟ್‌, 5 ಏಕದಿನ ಹಾಗೂ 1 ಟಿ –20 ಪಂದ್ಯ ಆಡಲಿದೆ.

* 2018ರ ಜೂನ್‌, ಜುಲೈ– ಆಗಸ್ಟ್‌ನಲ್ಲಿ ಭಾರತ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, 5 ಟೆಸ್ಟ್‌, 5 ಏಕದಿನ ಹಾಗೂ 1 ಟಿ–20 ಪಂದ್ಯ ಆಡಲಿದೆ.

* 2018ರ ಅಕ್ಟೋಬರ್‌ನಲ್ಲಿ ಭಾರತ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, 3 ಟೆಸ್ಟ್‌, 5 ಏಕದಿನ ಹಾಗೂ 1 ಟಿ–20 ಪಂದ್ಯ ಆಡಲಿದೆ.

* 2018ರ ಡಿಸೆಂಬರ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

* 2019ರ ಜನವರಿ– ಪೆಬ್ರವರಿಯಲ್ಲಿ ಭಾರತ – ನ್ಯೂಜಿಲೆಂಡ್‌ ನಡುವೆ 5 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯ ನಡೆಯಲಿದೆ.

* 2019ರ ಪೆಬ್ರವರಿಯಲ್ಲಿ ಭಾರತ – ಆಸ್ಟ್ರೇಲಿಯಾ ನಡುವೆ 3 ಏಕದಿನ, 2 ಟಿ –20 ಪಂದ್ಯ ನಡೆಯಲಿವೆ.

* 2019ರ ಮಾರ್ಚ್‌ನಲ್ಲಿ ಭಾರತ –ಜಿಂಬಾಬ್ವೆ  ನಡುವೆ 1 ಟೆಸ್ಟ್‌, 3 ಏಕದಿನ ಪಂದ್ಯ ನಡೆಯಲಿವೆ.

No Comments

Leave A Comment