Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಶಶಿಕಲಾಗೆ ವಿಐಪಿ ಸೌಲಭ್ಯ ಇಲ್ಲ: ಡಿಜಿ ಸತ್ಯನಾರಾಯಣ ರಾವ್; ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಬೆಂಗಳೂರು: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಕಾರಾಗೃಹ ಡಿಐಜಿ ಡಿ. ರೂಪಾ ಮಾಡಿರುವ ಆರೋಪ ಧಾರರಹಿತವಾದದ್ದು ಎಂದು ಡಿಜಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ಸಾಕ್ಷಿ ಹಾಗೂ ವಿವರಣೆ ನೀಡುವಂತೆ ರೂಪಾ ಅವರಿಗೆ ಮೆಮೋ ನೀಡಿರುವುದಾಗಿ ಅವರು ತಿಳಿಸಿದ್ದಾರೆ.  ಜೈಲಿನ ಅಧಿಕಾರಿಘಲ ವಿರುದ್ಧ ನನಗಾಗಲಿ ಅಥವಾ ಸರ್ಕಾರಕ್ಕಾಗಲಿ ಅವರು ಯಾವುದೇ ವರದಿ ಸಲ್ಲಿಸಿಲ್ಲ,  ಇಲಾಖೆ ಸೇರಿದ ಮೂರೇ ವಾರಗಳಲ್ಲಿ ಅಷ್ಟೊಂದು ತಪ್ಪುಗಳನ್ನು ಹೇಗೆ ಅವರು ಕಂಡು ಹಿಡಿದರು ಎಂದು ಪ್ರಶ್ನಿಸಿದ್ದಾರೆ.  ತಿಂಗಳುಗಳ ಹಿಂದೆ ನಡೆದಿರುವ ವಿಷಯಗಳ ಬಗ್ಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದ್ದಾರೆ.

ಅವರಿಗೆ ಅನುಮಾನಗಳಿದ್ದರೇ ಮೊದಲು ನನ್ನ ಬಳಿ ಬಂದು ಮಾತನಾಡಿ ಪರಿಹರಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ನೇರವಾಗಿ ಮಾಧ್ಯಮಗಳ ಬಳಿ ತೆರಳಿ, ತಾವು ಏನು ತಪ್ಪು ವರದಿ ಮಾಡಿದ್ದಾರೋ ಅದನ್ನೆಲ್ಲಾ ಮೀಡಿಯಾ ಮುಂದೆ ತೋರಿಸಿದ್ದಾರೆ. ಶುಕ್ರವಾರ ತಮ್ಮನ್ನು ಭೇಟಿ ಮಾಡಲು ಅವರಿಗೆ ಹೇಳಿದ್ದೇನೆ,  ಜೊತೆಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ  ಅವರು ನೀಡಿದ್ದಾರೆ ಎಂದು ಹೇಳಲಾಗಿರುವ ವರದಿಯನ್ನು ನನಗೆ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ  ಸೋಮವಾರ ಎಲ್ಲಿ ಪರಿಶೀಲನಾ ಸಭೆ ಏರ್ಪಡಿಸಿದ್ದರು ಎಂಬುದನ್ನು ಆಕೆಗೆ ಪ್ರಶ್ನಿಸಿ ಎಂದು ಮಾಧ್ಯಮದವರಿಗೆ ಸತ್ಯನಾರಾಯಣ ರಾವ್ ಹೇಳಿದ್ದಾರೆ, ಇನ್ನೂ 2 ಕೋಟಿ ರು. ಲಂಚದ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಹಣದ ವಿಷ ಬಿಡಿ, ಅವರಿಗೆ ಕಾನೂನಿನಿಂದ ಒಂದು ಸಣ್ಣ ರಿಲ್ಯಾಕ್ಷೇಷನ್ ಕೂಡ ನೀಡಿಲ್ಲ, ಅವರನ್ನು ಭೇಟಿ ಮಾಡುವವರ ನಿಯಮದಲ್ಲಿ ಸಣ್ಣ ಬದಲಾವಣೆ ಕೂಡ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ನಾನು ಜೈಲಿಗೆ ಭೇಟಿ ನೀಡಲು ಮಾತ್ರ ಆಕೆಗೆ ಅಧಿಕಾರ ನೀಡಿದ್ದೇನೆ, ಇದರಲ್ಲ ಮುಚ್ಚು ಮರೆ ಮಾಡುವಂತದ್ದು ಏನು ಇಲ್ಲ, ಎಂದು ಹೇಳಿದ್ದಾರೆ.

ಜೊತೆಗೆ ರೂಪಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ತನಿಖೆಗೆ ಆದೇಶ

ಇನ್ನು ಜೈಲಿನಲ್ಲಿ ಶಶಿಕಲಾಗೆ ವಿಶೇಷ ಆತಿಥ್ಯ ನೀಡುತ್ತಿರುವ ಸಂಬಂದ  ಡಿಐಜಿ ರೂಪಾ ನೀಡಿರುವ ವರದಿ ಸಂಬಂಧ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ತೊಂಡಗಾಳ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಜೈಲು ಅಧಿಕಾರಿಗಳು ಲಂಚ ಪಡೆದಿರುವ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾಗೆ ವಿಶೇಷ ಆತಿಥ್ಯ ಒದಗಿಸಲು 2 ಕೋಟಿ ರು ಲಂಚ ನೀಡಲಾಗಿದೆ. ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ಕಾರಾಗೃಹಗಳ ಇಲಾಖೆಯ ಡಿಜಿಪಿ ಎಚ್‌. ಎನ್‌.ಸತ್ಯನಾರಾಯಣರಾವ್ 2 ಕೋಟಿ ಲಂಚ ಪಡೆದಿದ್ದಾರೆ. ಆಕೆಗೆ ವಿಶೇಷ ಅಡುಗೆ ಕೋಣೆ ವ್ಯವಸ್ಥೆ ಮಾಡಿದ್ದು, ವಿಶೇಷ ಅಡುಗೆ ತಯಾರಕ ಆಕೆಗೆ ಪ್ರತ್ಯೇಕವಾಗಿ ಆಹಾರ ತಯಾರಿಸಿಕೊಡುತ್ತಾನೆ ಎಂದು ಕಾರಾಗೃಹ ಇಲಾಖೆಯ ಡಿಐಜಿ ಡಿ.ರೂಪಾ ಆರೋಪಿಸಿದ್ದರು.

ಜೊತೆಗೆ ಛಾಪಾ ಕಾಗದ ಪ್ರಕರಣ ಮುಖ್ಯ ಆರೋಪಿ ಅಬ್ದುಲ್‌ ಕರಿಂ ಲಾಲ್‌ ತೆಲಗಿ ಕೋಣೆಯಲ್ಲಿ 3 ರಿಂದ 4 ಮಂದಿ ವಿಚಾರಣಾ ಕೈದಿಗಳಿದ್ದು ಅವನ ಬಾಡಿ ಮಸಾಜ್ ಮಾಡುತ್ತಿದ್ದಾರೆ ಎಂದು ಸಹ ರೂಪಾ ಆಪಾದಿಸಿದ್ದಾರೆ.

No Comments

Leave A Comment