Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಅಜೇಯ್ ರಾವ್ ನಟನೆಯ “ಧೈರ್ಯಂ” ಜುಲೈ 21ಕ್ಕೆ ರಿಲೀಸ್

ಅಜೇಯ್‌ ರಾವ್‌ ನಾಯಕರಾಗಿರುವ “ಧೈರ್ಯಂ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಜುಲೈ 21ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಅಜೇಯ್‌ ರಾವ್‌ ತುಂಬಾ ನಿರೀಕ್ಷೆ ಇಟ್ಟಿರುವ ಸಿನಿಮಾವಿದು. ಅದಕ್ಕೆ ಕಾರಣ ಮೊದಲ ಬಾರಿಗೆ ಅಜೇಯ್‌ ಆ್ಯಕ್ಷನ್‌ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿರೋದು. “ನನಗೆ ಇದು ಹೊಸ ಅನುಭವ. ಈ ತರಹದ ಒಂದು ಕಥೆಗೆ ನಾನು ಎದುರು ನೋಡುತ್ತಿದ್ದೆ. ಈಗ ಸಿಕ್ಕಿದೆ. ನಿರ್ದೇಶಕ ಶಿವತೇಜಸ್‌ ಅಂದುಕೊಂಡಂತೆ ಸಿನಿಮಾ ಮಾಡಿದ್ದಾರೆ. ಮಧ್ಯಮ ವರ್ಗದ ಹುಡುಗನೊಬ್ಬನ ಕಥೆಯನ್ನು ಈ ಸಿನಿಮಾ ಆಧರಿಸಿದೆ’ ಎನ್ನುವುದು ಅಜೇಯ್‌ ಮಾತು.

ಚಿತ್ರದಲ್ಲಿ ಅಜೇಯ್‌ ಎದುರು ವಿಲನ್‌ ಆಗಿ ರವಿಶಂಕರ್‌ ನಟಿಸಿದ್ದಾರೆ. ರವಿಶಂಕರ್‌ ಎದುರು ಡೈಲಾಗ್‌ ಹೇಳುವಾಗ ಅಜೇಯ್‌ “ಧೈರ್ಯ, ಧೈರ್ಯಂ’ ಎಂದು ಮನಸಿನಲ್ಲಿ ಅಂದುಕೊಂಡೇ ಡೈಲಾಗ್‌ ಹೇಳಿದರಂತೆ. ಚಿತ್ರದಲ್ಲಿ ಅದಿತಿನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರ ಪಕ್ಕದ್ಮನೆ ಹುಡುಗಿಯಂತೆ ಇದ್ದು, ಜನರಿಗೆ ಇಷ್ಟವಾಗುವ ವಿಶ್ವಾಸವಿದೆಯಂತೆ.

ಚಿತ್ರದಲ್ಲಿ ರವಿಶಂಕರ್‌ ದುಷ್ಟ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. “ಸಿನಿಮಾದುದ್ದಕ್ಕೂ ಸಾಗಿಬರುವ ಗಟ್ಟಿಪಾತ್ರ ಸಿಕ್ಕಿದೆ. ಒಂದು ಕಡೆ ಕುಟುಂಬದ ಸಮಸ್ಯೆ, ಇನ್ನೊಂದು ಕಡೆ ಕೆಲಸ … ಎರಡನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಇಲ್ಲಿ ಹೈಲೈಟ್‌. ಚಿತ್ರದ ಪ್ರತಿ ಸನ್ನಿವೇಶ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ರವಿಶಂಕರ್‌ ಮಾತು. ಚಿತ್ರವನ್ನು ಡಾ.ರಾಜು ನಿರ್ಮಿಸಿದ್ದಾರೆ.

“ಧೈರ್ಯವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ನಾನೇ ಕಾರಣ. ವೃತ್ತಿಯಲ್ಲಿ ವೈದ್ಯನಾಗಿರುವ ನಾನು ಈಗ ಧೈರ್ಯ ಮಾಡಿ ಸಿನಿಮಾ ಮಾಡಿದ್ದೇನೆ’ ಎಂಬುದು ಅವರ ಮಾತು. ನಿರ್ದೇಶಕ ಶಿವ ತೇಜಸ್‌ ಅವರಿಗೆ ಸಿನಿಮಾಕ್ಕೆ ಎಲ್ಲೆಡೆಯಿಂದ ಬೇಡಿಕೆ ಬರುತ್ತಿರುವ ಖುಷಿ ಇದೆಯಂತೆ. ಹೊಸ ಬಗೆಯ ಮೈಂಡ್‌ಗೆಮ್‌ ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ಶಿವತೇಜಸ್‌ ಮಾತು.

 

No Comments

Leave A Comment