Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಒಂದೇ ದಿನ 2 ಸಿನಿಮಾ; ಕನ್ನಡ-ತಮಿಳಿನಲ್ಲಿ ಶ್ರದ್ಧಾ 3ನೇ ಚಿತ್ರ ರಿಲೀಸ್

ಶ್ರದ್ಧಾ ಶ್ರೀನಾಥ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಸಿನಿಮಾ ಹೊರತು ಬೇರೇನು ಕಾರಣವಿಲ್ಲ. ಶ್ರದ್ಧಾ ಅಭಿನಯಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದೆ. ಇದು ಶ್ರದ್ಧಾಗೆ ಖುಷಿ ತಂದಿರೋದು ಸುಳ್ಳಲ್ಲ. ಹೌದು, ಶ್ರದ್ಧಾ  ಶ್ರೀನಾಥ್‌ ಅಭಿನಯದ ಕನ್ನಡ ಚಿತ್ರ “ಆಪರೇಷನ್‌ ಅಲಮೇಲಮ್ಮ’ ಜುಲೈ 21 ರಂದು ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಶ್ರದ್ಧಾ ನಟಿಸಿರುವ ತಮಿಳು ಚಿತ್ರ “ವಿಕಂ ವೇದ’ ಸಿನಿಮಾಕೂಡಾ ಜುಲೈ 21 ರಂದು ತೆರೆಕಾಣುತ್ತಿದೆ. ಈ ಮೂಲಕ ಶ್ರದ್ಧಾ ಶ್ರೀನಾಥ್‌ಗೆ ಡಬಲ್‌ ಖುಷಿ.

ಈಗಾಗಲೇ ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿ ನಟಿಸಿರುವ ಎರಡೆರಡು ಸಿನಿಮಾಗಳು ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿದೆ. ಈಗ ಮೂರನೇ ಸಿನಿಮಾ ಒಂದೇ ದಿನ ಎರಡು ಕಡೆ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ “ಯುಟರ್ನ್’ ಹಾಗೂ “ಉರ್ವಿ’ ಚಿತ್ರಗಳು ಬಿಡುಗಡೆಯಾದರೆ ತಮಿಳಿನಲ್ಲಿ “ಕಾಟ್ರಾ ವೆಲ್ಲಿದೈ’ ಹಾಗೂ “ಇವನ್‌ ತಂಥಿರನ್‌’
ಚಿತ್ರಗಳು ಬಿಡುಗಡೆಯಾಗಿವೆ. ಈಗ ಮಾಧವನ್‌ ನಾಯಕರಾಗಿರುವ ತಮಿಳು ಚಿತ್ರ “ವಿಕ್ರಂ ವೇದ’ದಲ್ಲಿ ಶ್ರದ್ಧಾ ಶ್ರೀನಾಥ್‌, ಪ್ರಿಯಾ ಎಂಬ ಪಾತ್ರ ಮಾಡಿದ್ದಾರೆ.

ಇದಲ್ಲದೇ ಶ್ರದ್ಧಾ ನಟಿಸಿರುವ ತಮಿಳು ಚಿತ್ರ “ರಿಚ್ಚಿ’ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇದು ಕನ್ನಡದ “ಉಳಿದವರು ಕಂಡಂತೆ’ ಚಿತ್ರದ ರೀಮೇಕ್‌. ಸದ್ಯ ಶ್ರದ್ಧಾ ನಾಯಕಿಯಾಗಿ ನಟಿಸಿರುವ “ಆಪರೇಷನ್‌ ಅಲಮೇಲಮ್ಮ’ ಚಿತ್ರದ ಟ್ರೇಲರ್‌ ಹಿಟ್‌ ಆಗಿದ್ದು, ಇಲ್ಲಿ ಅನನ್ಯ ಟೀಚರ್‌ ಪಾತ್ರದಲ್ಲಿ ಶ್ರದ್ಧಾ  ಕಾಣಿಸಿಕೊಂಡಿದ್ದಾರೆ. “ಯು ಟರ್ನ್’ ನೋಡಿದವರು
ಶ್ರದ್ಧಾ ತುಂಬಾ ಸೀರಿಯಸ್‌ ಎಂದು ಭಾವಿಸಿಕೊಂಡಿದ್ದರಂತೆ. ಜೊತೆಗೆ ಸೀರಿಯಸ್‌ ಪಾತ್ರಗಳೇ ಹುಡುಕಿಕೊಂಡು ಬರುತ್ತಿದ್ದು, ಬ್ರಾಂಡ್‌ ಆಗುವ ಅಪಾಯವಿದ್ದ ಕಾರಣ ಶ್ರದ್ಧಾ “ಆಪರೇಷನ್‌ ಅಲಮೇಲಮ್ಮ’ದಂತಹ ವಿಭಿನ್ನ ಪಾತ್ರವಿರುವಸಿನಿಮಾ ಒಪ್ಪಿಕೊಂಡಿದ್ದಾಗಿ ಹೇಳುತ್ತಾರೆ.

ಸದ್ಯ ಶ್ರದ್ಧಾ, ವಿಜಯ್‌ ನಾಯಕರಾಗಿರುವ “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಧ್ರುವ ಸರ್ಜಾ ಅವರ “ಹಯಗ್ರಿವ’ಗೂ ಶ್ರದ್ಧಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

No Comments

Leave A Comment