Log In
BREAKING NEWS >
ಉಡುಪಿಯ ಶ್ರೀಶಿರೂರು ಶ್ರೀಗಳು ಹರಿಪಾದಕ್ಕೆ-ಇನ್ನಿಲ್ಲವಾದರು ಶ್ರೀಗಳು-ಉಡುಪಿಯ ಶ್ರೀಕೃಷ್ಣಮಠ ಹಾಗೂ ಶಿರೂರು ಮಠಕ್ಕೆ ಬಿಗುಭದ್ರತೆ

ಉಡುಪಿ: ಪಡುಬೆಳ್ಳೆಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

ಉಡುಪಿ : ಇಲ್ಲಿನ ಶಿರ್ವದ ಪಡುಬೆಳ್ಳೆಯಲ್ಲಿ  ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬುಧವಾರ ರಾತ್ರಿ ನಡೆದಿದೆ.

ಶಂಕರ ಆಚಾರ್ಯ(51) ಪತ್ನಿ ನಿರ್ಮಲ ಆಚಾರ್ಯ( 45) ಮಕ್ಕಳಾದ ಶ್ರುತಿ(25) ಮತ್ತು  ಶ್ರೇಯ( 22) ಆತ್ಮಹತ್ಯೆಗೆ ಶರಣಾದವರು.

ಪಕ್ಕದ ಮನೆಯಲ್ಲಿ ವಾಸವಿದ್ದ ಸಂಬಂದಿಗಳಿಂದ ಪ್ರಕರಣ ಬಯಲಾಗಿದ್ದು, ಮಣಿಪಾಲ ಆಸ್ಪತ್ರೆಗೆ ಶವಗಳನ್ನು ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರ್‌ ಆಚಾರ್ಯ ಅವರು ಪಡುಬೆಳ್ಳೆಯಲ್ಲಿ ಚಿನ್ನದ ಅಂಗಡಿ  ಹೊಂದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ಸಯನೈಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಧೃಡಪಡಬೇಕಿದೆ.

ಎಂಬಿಎ ಪದವೀಧರೆಯಾಗಿದ್ದ ಶ್ರುತಿಗೆ ಈಗಾಗಲೇ ನಿಶ್ಚಿತಾರ್ಥವಾಗಿದ್ದು ಸೆಪ್ಟಂಬರ್‌ 3 ರಂದು ವಿವಾಹ ನಿಗದಿಯಾಗಿತ್ತು. ಶ್ರೇಯಾ  ಬಿಸಿಎ ಮುಗಿಸಿ ಎಂಸಿಎ ಮಾಡಲು ಮಣಿಪಾಲದ ಕಾಲೇಜಿನಲ್ಲಿ ಫೀಜನ್ನೂ ಕಟ್ಟಿದ್ದರು ಎಂದು ತಿಳಿದು ಬಂದಿದೆ.

No Comments

Leave A Comment