Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಬಾಡಿಗೆ ಕಳ್ಳರು! ಮಕ್ಕಳಿಗೆ ತರಬೇತಿ, ಐಶಾರಾಮಿ ಮದುವೆಯೇ ಟಾರ್ಗೆಟ್!

ಭೋಪಾಲ್: ವಾಹನ, ವಿಮಾನ ಚಲಾಯಿಸಲು ತರಬೇತಿ, ಉದ್ಯೋಗ ಮಾಡಲು ತರಬೇತಿ ಹೀಗೆ ಎಲ್ಲ ರೀತಿಯ ತರಬೇತಿ ಬಗ್ಗೆ ಕೇಳಿದ್ದೀರಿ. ಆದರೆ ಮಧ್ಯಪ್ರದೇಶದ ಪಾಚೋರ್ ಮತ್ತು ಗುಲ್ ಖೇಡಿ ಗ್ರಾಮದ ನಿವಾಸಿಗಳು ತಮ್ಮ  ಮಕ್ಕಳನ್ನು ಗ್ಯಾಂಗ್ ವೊಂದಕ್ಕೆ ಬಾಡಿಗೆಗೆ ಕೊಡುತ್ತಾರಂತೆ!

ಹೌದು ಈ ಮಕ್ಕಳನ್ನು ಬಾಡಿಗೆ ಪಡೆಯುವ ಗ್ಯಾಂಗ್ ಐಶಾರಾಮಿ ಮದುವೆಯಲ್ಲಿ ಕಳ್ಳತನ ಮಾಡುವುದು ಹೇಗೆ ಎಂಬುದರ ಬಗ್ಗೆ ತರಬೇತಿಯನ್ನೂ ನೀಡುತ್ತದೆಯಂತೆ, ಈ ಗ್ಯಾಂಗ್ ನ ಪ್ರಮುಖ ಟಾರ್ಗೆಟ್ ಶ್ರೀಮಂತ ಕುಳಗಳ ಮದುವೆ!

ದೆಹಲಿ ಸೇರಿದಂತೆ ದೇಶದ ಮಹಾನಗರಗಳಲ್ಲಿ ನಡೆಯುವ ಮದುವೆಯೇ ಪ್ರಮುಖ ಗುರಿ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಪೊಲೀಸ್ ತನಿಖೆಯ ಬಳಿಕ ಈ ಮಾಹಿತಿ ಹೊರಬಿದ್ದಿದೆ. ಈ ಎರಡು ಗ್ರಾಮಗಳ ನಿವಾಸಿಗಳು ತಮ್ಮ ಮಕ್ಕಳನ್ನು ಬ್ಯಾಂಡ್, ಬಜಾನಾ, ಬರಾತ್ ಗ್ಯಾಂಗ್ ಗೆ ಬಾಡಿಗೆಗೆ ಕೊಡುತ್ತಾರೆಂದು ವರದಿ ತಿಳಿಸಿದೆ.

ಪೋಷಕರ ಜತೆ ಒಪ್ಪಂದವನ್ನೂ ಕೂಡಾ ಮಾಡಿಕೊಳ್ಳುತ್ತಾರೆ. ಹೀಗೆ ಬಾಡಿಗೆಗೆ ಪಡೆಯುವ ಮಕ್ಕಳಿಗೆ ವರ್ಷಕ್ಕೆ 2.5 ಲಕ್ಷ ರೂಪಾಯಿ ಸಂಬಳದೊಂದಿಗೆ ಮನೆಗೆ ವಾಪಸ್ ಬರಬೇಕು ಎಂಬುದು ಕರಾರು. ಕದಿಯುವುದು ಹೇಗೆ ಎಂಬ ತರಬೇತಿ ಮುಗಿದ ಮೇಲೆ ಈ ಮಕ್ಕಳನ್ನು ಬೃಹತ್ ನಗರಗಳಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ಕಳುಹಿಸುತ್ತಾರಂತೆ. ಅಲ್ಲಿ ಅವರು ಕೈಚಳಕ ತೋರಿಸುವುದೇ ಅವರ ಸಾಧನೆಯ ಮಾನದಂಡ!

ಈ ಕಳ್ಳರ ಗ್ಯಾಂಗ್ ನಿಂದಾಗಿ ಪೊಲೀಸರಿಗೂ ತಲೆನೋವುಂಟಾಗಿದ್ದು, ಆ ನಿಟ್ಟಿನಲ್ಲಿ ವಿವಿಧ ರಾಜ್ಯದ ಸುಮಾರು 86 ಪೊಲೀಸರ ತಂಡ ಪಾಚೋರ್ ಗ್ರಾಮಕ್ಕೆ ಭೇಟಿ ನೀಡಿದೆ. ಅಲ್ಲದೇ ಮಕ್ಕಳನ್ನು ಬಾಡಿಗೆ ಪಡೆದ ಖದೀಮರನ್ನು ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ ತಿಂಗಳೊಂದರಲ್ಲೇ ದೆಹಲಿಯಲ್ಲಿ ನಡೆದ ಐಶಾರಾಮಿ ಮದುವೆಯಲ್ಲಿ ಹುಡುಗರು 34 ಕಳ್ಳತನ ಪ್ರಕರಣ ನಡೆಸಿದ್ದಾರೆ. ಅದರಲ್ಲಿ ಬಹುತೇಕರು ಪಾಚೋರ್ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment