Log In
BREAKING NEWS >
ಸಮಸ್ತ ಓದುಗರಿಗೆ, ನಮಗೆ ಜಾಹೀರಾತು ನೀಡಿ ಸಹಕರಿಸುತ್ತಿರುವ ಎಲ್ಲಾ ಜಾಹೀರಾತುದಾರರಿಗೆ ಮತ್ತು ನಮ್ಮ ಅಭಿಮಾನಿಗಳಿಗೆ "ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ "ಶ್ರೀಗೌರಿ-ಗಣೇಶ "ಹಬ್ಬದ ಶುಭಾಶಯಗಳು

ಇವಳೆಂಥ ತಾಯಿ! ಪುಟ್ಟ ಕಂದಮ್ಮನನ್ನೇ ಕೆರೆಗೆ ಎಸೆದು ಹತ್ಯೆಗೈದ ತಾಯಿ

ಬೆಳಗಾವಿ:ನ್ಯುಮೋನಿಯಾದಿಂದ ಬಳಲುತ್ತಿದ್ದ 3 ತಿಂಗಳ ಪುಟ್ಟ ಮಗುವನ್ನು ತಾಯಿಯೇ ಕೆರೆಗೆ ಎಸೆದು ಹತ್ಯೆಗೈದಿರುವ ದಾರುಣ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಬುಧವಾರ ನಡೆದಿದೆ.

ಚಿಕಿತ್ಸೆಗೆ ಹಣವಿಲ್ಲದ ಹಿನ್ನೆಲೆಯಲ್ಲಿ ಈ ದುಷ್ಕೃತ್ಯ ಎಸಗಿರುವುದಾಗಿ ಆರೋಪಿ ತಾಯಿ ಶ್ರುತಿ ನಂದಗಾವಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ ಮಗುವನ್ನು ಕೆರೆಗೆ ಎಸೆದು ಕೊಲೆಗೈದಿರುವ ಹಿಂದೆ ಬೇರೆ ಏನಾದರೂ ಕಾರಣ ಇದೆಯಾ ಎಂಬ ಬಗ್ಗೆ ಯಮಕನಮರಡಿ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ 3 ತಿಂಗಳ ಪುಟ್ಟ ಕಂದಮ್ಮನನ್ನೇ ಕೆರೆಗೆ ಎಸೆದು ಹತ್ಯೆಗೈದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪತಿ ಸಂತೋಷ್, ಪತ್ನಿಯ ವಿರುದ್ಧವೇ ದೂರು ನೀಡಲು ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ

 

No Comments

Leave A Comment