Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಹತ್ಯೆಗೀಡಾದ RSS ಕಾರ್ಯಕರ್ತ ಶರತ್‌ ಮನೆಗೆ ಸಚಿವ ರೈ,ಸಾಂತ್ವನ

ಬಂಟ್ವಾಳ : ಬಿ.ಸಿ.ರೋಡ್‌ನ‌ಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಪಡ್ಪು ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ಕ್ಷೇತ್ರದ ಶಾಸಕ ರಮನಾಥ ರೈ ಅವರು ಬುಧವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಶರತ್‌ ತಂದೆ ತನಿಯಪ್ಪ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ತನಿಯಪ್ಪ ಕಣ್ಣೀರಿಟ್ಟರು.

ರಾಜಕೀಯ ಬದಿಗೊತ್ತಿ ರೈ ಅವರ ಭೇಟಿಗೆ ಸಾಮಾಜಿಕ ತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ತನಿಯಪ್ಪ ಅವರು ಪುತ್ರ ಶೋಕದಲ್ಲಿ ನಾನು ಹಿಂದೆ 20 ವರ್ಷ ರೈ ಅವರ ಬಟ್ಟೆ ಒಗೆದು ಕೊಟ್ಟಿದ್ದೆ ಮಗ ಸತ್ತಾಗ ಅವರು ಸಾಂತ್ವನ ಹೇಳಲು ಬರಲಿಲ್ಲ ಎಂದು ನೋವು ತೋಡಿಕೊಂಡಿದ್ದರು.

ಭೇಟಿ ವೇಳೆ ಸುದ್ದಿಗಾರರಿಗೆ ಫೋಟೋಗಳನ್ನು ಕ್ಲಿಕ್ಕಿಸದಂತೆ ರೈ ಮನವಿ ಮಾಡಿರುವ ಬಗ್ಗೆ ವರದಿಯಾಗಿದೆ.

ಮಂಗಳವಾರ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಶರತ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಈ ವೇಳೆ ರೈ ವಿರುದ್ಧ ಕಿಡಿ ಕಾರಿದ್ದರು.

No Comments

Leave A Comment