Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ವಿದ್ಯುತ್‌ ಜಂಕ್ಷನ್‌ ಪೆಟ್ಟಿಗೆ ಪ್ರಕರಣ: ಅನುಷ್ಕಾಗೆ ಕ್ಲೀನ್‌ ಚಿಟ್‌!

ಮುಂಬಯಿ: ನಗರದ  ವೆಸೋìವಾ ಟವರ್‌ನ 20ನೇ ಮಹಡಿಯಲ್ಲಿ  ಎಲ್ಲರೂ ನಡೆದಾಡುವ ದಾರಿಯಲ್ಲಿ  ವಿದ್ಯುತ್‌ ಜಂಕ್ಷನ್‌ ಪೆಟ್ಟಿಗೆಯನ್ನು  ಅಳವಡಿಸಿದ್ದಕ್ಕಾಗಿ  ಬಾಲಿವುಡ್‌ ನಟಿ ಅನುಷ್ಕಾ ಶರ್ಮ  ಅವರ  ವಿರುದ್ಧ ದಾಖಲಾಗಿದ್ದ  ದೂರಿನ  ಸಂಬಂಧ ತನಿಖೆ ನಡೆಸಿದ ಬಿಎಂಸಿ  ಅನುಷ್ಕಾ  ಶರ್ಮಳಿಗೆ   ಕ್ಲೀನ್‌ಚಿಟ್‌ ನೀಡಿದೆ.

ಬದ್ರೀನಾಥ್‌  ಟವರ್ನ 16ನೇ ಮಹಡಿಯಲ್ಲಿ  ವಾಸವಾಗಿರುವ ಸುನಿಲ್‌ ಬಾತ್ರಾ  ಮೇನಲ್ಲಿ  ಬಿಎಂಸಿ  ಆಯುಕ್ತ  ಅಜಯ್‌ ಮೆಹ್ತಾ ಅವರಿಗೆ  ಈ ದೂರನ್ನು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ್ದ  ಸ್ಥಳೀಯ ವಾರ್ಡ್‌ ಕಚೇರಿ ಅನುಷ್ಕಾ ಶರ್ಮರ ಈ ಕ್ರಮ ಆಕ್ಷೇಪಕಾರಿ ಎಂದು ತಿಳಿಸಿತ್ತಾದರೂ ಇದೀಗ  ಇದೇ  ಕಚೇರಿಯಿಂದ ದೂರುದಾರರಿಗೆ ಪತ್ರವನ್ನು ಬರೆದು ವಿದ್ಯುತ್‌ ಜಂಕ್ಷನ್‌  ಬಾಕ್ಸ್‌  ಅಳವಡಿಸಲಾಗಿರುವ  ಸ್ಥಳವು  ಅನುಷ್ಕಾ ಶರ್ಮಳಿಗೆ  ಸೇರಿದ್ದಾಗಿದೆ ಎಂದು  ತಿಳಿಸಿದೆ.

No Comments

Leave A Comment