Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಖ್ಯಾತ ಈಜುಪಟು ಕಾಂಚನಮಾಲಾ ಬರ್ಲಿನ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾಳಂತೆ

ನವದೆಹಲಿ:ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 110 ಪದಕಗಳನ್ನು ಗಳಿಸಿ ಹೆಸರುಗಳಿಸಿದ್ದ ನಾಗ್ಪುರದ ಅಮರಾವತಿಯ ಕಾಂಚನಮಾಲಾ ಪಾಂಡೆ ಅವರನ್ನು ಬರ್ಲಿನ್ ನಲ್ಲಿ ಬಲವಂತವಾಗಿ ಭಿಕ್ಷೆ ಬೇಡುವಂತೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ವರ್ಷ ಬರ್ಲಿನ್ ನಲ್ಲಿ ನಡೆದ ವಿಶ್ವ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಗಾಗಿ ಭಾರತದಿಂದ ಆಯ್ಕೆಯಾಗಿರುವ ಏಕೈಕ ಮಹಿಳಾ ಈಜು ಅಭ್ಯರ್ಥಿ ಕಾಂಚನಾಮಾಲಾ.

ಅದ್ಭುತ ಸಾಧಕಿ ಕಾಂಚನಮಾಲಾ:
ನಾಗ್ಪುರದ ಅಮರಾವತಿಯ ಕಾಂಚನಮಾಲಾಗೆ ಹುಟ್ಟು ಕುರುಡು. ಹಾಗಾಗಿ ಕಾಂಚನಮಾಲಾ ನೀರಿನೊಳಗೆ ಈಜುವಾಗ ಯಾವುದೇ ಪರಿಕರವನ್ನು ಉಪಯೋಗಿಸುವುದಿಲ್ಲ. ಯಾಕೆಂದರೆ ನೀರಿನೊಳಗೆ ಈಜುವಾಗ ಕಣ್ಣಿದ್ದರೂ ಒಂದೇ, ಇಲ್ಲದಿದ್ದರೂ ಒಂದೇ. ಬರೇ ಶಬ್ದವನ್ನೇ ಕೇಳಿಕೊಂಡು ಈಜುವ ಮಹಾನ್ ಸಾಧಕಿ ಆಕೆ!

2006ರ ಮೆಲ್ಬೋರ್ನ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಾಂಚನಗಂಗಾ 6 ಪದಕ ಪಡೆದು ಇತಿಹಾಸ ಬರೆದಿದ್ದರು. ಅಷ್ಟೇ ಅಲ್ಲ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 100ಕ್ಕೂ ಅಧಿಕ ಪದಕ ಪಡೆದ ಕೀರ್ತಿ ಕಾಂಚನಗಂಗಾ ಅವರದ್ದು.i

ಶೇಮ್…ಶೇಮ್…ಮಹಾರಾಷ್ಟ್ರ ಸರ್ಕಾರ!
ಇಂಡಿಯಾ ಟುಡೇ ವರದಿ ಪ್ರಕಾರ ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ಬೇಜವಾಬ್ದಾರಿತನದಿಂದಾಗಿ ಕಾಂಚನಮಾಲಾ ಬರ್ಲಿನ್ ನಲ್ಲಿ ಭಿಕ್ಷೆ ಬೇಡುವಂತಾಗಿದೆ! ಕೈಯಲ್ಲಿದ್ದ ಹಣವೆಲ್ಲಾ ಖರ್ಚಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ಇನ್ನೂ ಕಾಂಚನಾಗಂಗಾಗೆ ತಲುಪಿಲ್ಲದಿರುವುದು!

ಜುಲೈ 3ರಿಂದ 9ರವರೆಗೆ ಜರ್ಮನ್ ರಾಜಧಾನಿ ಬರ್ಲಿನ್ ನಲ್ಲಿ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆ ನಡೆದಿದ್ದು, ಇದರಲ್ಲಿ ಭಾರತದ ಕಾಂಚನಗಂಗಾ ಸೇರಿದಂತೆ ಆರು ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು. ವಿಪರ್ಯಾಸ ಎಂಬಂತೆ ಸರ್ಕಾರ ಬಿಡುಗಡೆ ಮಾಡಿರುವ ಹಣ ಕಾಂಚನಗಂಗಾಗೆ ಇನ್ನೂ ತಲುಪಿಲ್ಲವಂತೆ. ಖ್ಯಾತ ಶೂಟರ್ ಅಭಿನವ್ ಬಿಂದ್ರಾ ಈ ಘಟನೆ ಬಗ್ಗೆ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

No Comments

Leave A Comment