ಉಪ ರಾಷ್ಟ್ರಪತಿ ಹುದ್ದೆಗೆ ಗಾಂಧಿ: ನಿತೀಶ್ ಒಪ್ಪಿಗೆ ಪಡೆದ ರಾಹುಲ್
ಹೊಸದಿಲ್ಲಿ : ವಿರೋಧ ಪಕ್ಷಗಳು ಉಪ ರಾಷ್ಟ್ರಪತಿ ಚುನಾವಣೆಗೆ ಒಮ್ಮತದಿಂದ ಆಯ್ಕೆ ಮಾಡಿರುವ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು ಬೆಂಬಲಿಸುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಕೋರಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮನ್ನಿಸಿದ್ದಾರೆ.
ಈ ಮೊದಲು ರಾಷ್ಟ್ರಪತಿ ಹುದ್ದೆಯ ಎನ್ಡಿಎ ಅಭ್ಯರ್ಥಿಯಾಗಿರುವ ರಾಮ್ನಾಥ್ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದ ನಿತೀಶ್ ಕುಮಾರ್ ಅವರು ಆ ನಿಟ್ಟಿನಲ್ಲಿ ಮೊತ್ತ ಮೊದಲಾಗಿ ವಿರೋಧ ಪಕ್ಷಗಳನ್ನು ಸಂಪರ್ಕಿಸದೆಯೇ ನಿರ್ಧಾರಕ್ಕೆ ಬಂದಿದ್ದುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು.
ಎನ್ಡಿಟಿವಿ ವರದಿಯ ಪ್ರಕಾರ ನಿನ್ನೆ ಮಂಗಳವಾರ ವಿರೋಧ ಪಕ್ಷಗಳು ಒಮ್ಮತದಿಂದ ಉಪ ರಾಷ್ಟ್ರಪತಿ ಹುದ್ದೆಗೆ ಗೋಪಾಲಕೃಷ್ಣ ಗಾಂಧಿ ಅವರನ್ನು ಆಯ್ಕೆ ಮಾಡಿದ ತತ್ಕ್ಷಣ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಅವರನ್ನು ಖುದ್ದಾಗಿ ಭೇಟಿಯಾಗಿ ಬೆಂಬಲ ಯಾಚಿಸಿದ್ದರು.
ರಾಹುಲ್ ಮನವಿಗೆ ನಿತೀಶ್ ಮನ್ನಣೆ ನೀಡಿರುವುದಗಿ ಎನ್ಡಿಟಿವಿ ವರದಿ ಮಾಡಿದೆ.