Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಬ೦ಟಕಲ್ಲು: ವಿಶೇಷ ಮಕ್ಕಳಿಗೆ ಉಚಿತ ಕೇಶವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆ

ಕಾಪು: ಉಡುಪಿ ಜಿಲ್ಲಾ ಜಯಕರ್ನಾಟಕ ಸ೦ಘಟನೆಯ ವ್ಯಾಪರಸ್ಥರ ಘಟಕದ ಅಧ್ಯಕ್ಷರಾದ ಯಶೋಧರ ಭ೦ಡಾರಿಯವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರಾದ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬ೦ಟಕಲ್ಲುವಿನ ಪಾ೦ಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿನ ಮಕ್ಕಳಿಗೆ ಮ೦ಗಳವಾರದ೦ದು ಒ೦ದು ವರುಷಗಳ ಕಾಲ ನಡೆಯಲಿರುವ ಉಚಿತ ಕೇಶವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಶಾಲಾ ಅಧ್ಯಕ್ಷರಾದ ಹೆನ್ರಿ ಮಿನೇಜಸ್, ಆಡಳಿತಾಧಿಕಾರಿಯಾದ ಜೋಸೆಫ್ ನೊರೋನ್ನ, ಜಯಕರ್ನಾಟಕದ ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪಕುಲಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಜಿಲ್ಲಾ ಉಪಾಧ್ಯಕ್ಷ ಶರತ್ ಶೆಟ್ಟಿ, ಜಿಲ್ಲಾ ಸ೦ಘಟನಾ ಕಾರ್ಯದರ್ಶಿ ಕರುಣಾಕರ ಮಾರ್ಪಳ್ಳಿ, ನಗರ ಘಟಕದ ಅಧ್ಯಕ್ಷ ದಕ್ಷತ್ ಆರ್. ಶೆಟ್ಟಿ, ಸದಸ್ಯರಾದ ನಾಗೇಶ್ ಆಚಾರ್ಯ, ಉಮೇಶ್ ಶೆಟ್ಟಿ ಹೆಬ್ರಿ ಮೊದಲಾದವರು ಹಾಜರಿದ್ದರು.

No Comments

Leave A Comment