Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಮಿಸಿಸಿಪಿಯಲ್ಲಿ ಮಿಲಿಟರಿ ಸಾಗರ ಸರಕು ವಿಮಾನ ಪತನ; 16 ಮಂದಿ ಸಾವು

ವಾಷಿಂಗ್ಟನ್‌ : ಹಡಗುಗಳಿಗೆ ಇಂಧನ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುವ ಮಿಲಿಟರಿ ಸಾಗರ ಸರಕು ಸಾಗಣೆಯ ವಿಮಾನವೊಂದು ನಿನ್ನೆ ಸೋಮವಾರ ರಾತ್ರಿ ಪಶ್ಚಿಮ ಮಿಸಿಸಿಪಿಯ ಇಟಾ ಬೆನಾ ಎಂಬಲ್ಲಿನ ಹೊಲವೊಂದರಲ್ಲಿ  ಪತನಗೊಂಡು ಕನಿಷ್ಠ 16 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಪತನಗೊಂಡ ತಾಣದಿಂದ ಎಲ್ಲ ಹದಿನಾರು ಮಂದಿಯ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೀ ಫ್ಲೋರ್‌ ಕೌಂಟಿಯ ತುರ್ತು ಸ್ಥಿತಿ ವ್ಯವಸ್ಥಾಪನ ವಿಭಾಗದ ನಿರ್ದೇಶಕ ಫ್ರೆಡ್‌ ರ್‍ಯಾಂಡಲ್‌ ತಿಳಿಸಿದ್ದಾರೆ.

ಕೆಸಿ-130 ಸಾಗರ ಸರಕು ಸಾಗಣೆಯ ವಿಮಾನವು ಜು.10ರ ಸಂಜೆಯ ವೇಳಗೆ ಹಾರಾಟದಲ್ಲಿದ್ದಾಗ ಅವಘಡಕ್ಕೆ ಗುರಿಯಾಯಿತು ಎಂದು ಮ್ಯಾರೈನ್‌ ಕಾರ್ಪ್‌ ಸಂಸ್ಥೆ ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ. ಈ ಸಂಬಂಧ ಬೇರೆ ಯಾವುದೇ ಪೂರಕ ಮಾಹಿತಿಯನ್ನು ಅದು ನೀಡಿಲ್ಲ.

ಮ್ಯಾರೈನ್‌ ಕಾರ್‌ಪ್ಸ್‌ ವಕ್ತಾರ ಕ್ಯಾಪ್ಟನ್‌ ಸಾರಾ ಬರ್ನ್ಸ್ ಅವರು ಪಶ್ಚಿಮ ಮಿಸಿಸಿಪಿಯಲ್ಲಿ ಸೋಮವಾರ ರಾತ್ರಿ ಮ್ಯಾರೈನ್ಸ್‌ ಸರಕು ಸಾಗಣೆ ವಿಮಾನ ಪತನಗೊಂಡು 16 ಮಂದಿ ಮಡಿದಿರುವುದನ್ನು ದೃಢೀಕರಿಸಿದ್ದಾರೆ.

No Comments

Leave A Comment