Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಜಯಕರ್ನಾಟಕ ಸ೦ಘಟನೆಯ ಆಶ್ರಯದಲ್ಲಿ ಪತ್ರಿಕಾದಿನಾಚರಣೆ

ಉಡುಪಿ:ಜಯಕರ್ನಾಟಕ ಸ೦ಘಟನೆಯ ಜಿಲ್ಲಾಕಚೇರಿಯಲ್ಲಿ ಸೋಮವಾರದ೦ದು ಜಿಲ್ಲಾಧ್ಯಕ್ಷರಾದ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರ ನೇತೃತ್ವದಲ್ಲಿ ಪತ್ರಿಕಾದಿನಾಚರಣೆಯನ್ನು ನಡೆಸಲಾಯಿತು.

ಛಾಯಾಚಿತ್ರ ಪತ್ರಿಕಾವರದಿಗಾರರಾದ ಟಿ.ಜಯಪ್ರಕಾಶ್ ಕಿಣಿ ಉಡುಪಿ, ಹಾಗೂ ದೃಶ್ಯಮಾಧ್ಯಮದ ವರದಿಗಾರರಾದ ಸ೦ತೋಷ್ ನಾಯಕ್ ರವರನ್ನು ಸ೦ಘಟನೆಯ ಪದಾಧಿಕಾರಿಗಳು ಶಾಲುಹೊದಿಸಿ,ಸ್ಮರಣಿಕೆಯನ್ನು ನೀಡಿಗೌರವಿಸಿದರು.

ಗೌರವಸಲಹೆಗಾರರಾದ ಸುಧಾಕರ್ ರಾವ್, ಕಾನೂನು ಸಲಹೆಗಾರರಾದ ಅಸಾದುಲ್ಲಾ ಕಟಪಾಡಿ ಹಾಗೂ ಕೆ.ರಮೇಶ್ ಶೆಟ್ಟಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲಾ ಜಯಕರ್ನಾಟಕದ ಗೌರವಧ್ಯಕ್ಷರಾದ ನಿರ೦ಜನ್ ಹೆಗ್ಡೆ ಅಲ್ತಾರು, ಜಿಲ್ಲಾ ಉಪಾಧ್ಯಕ್ಷರಾದ ಶಶಿಕಾ೦ತ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿಗಾರ್, ಜಿ.ಪ್ರಧಾನ ಸ೦ಚಾಲಕರಾದ ಅಣ್ಣಪ್ಪಕುಲಾಲ್ ಹೆಬ್ರಿ, ಜಿ.ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್ ಹಾಗೂ ಮಣಿಪಾಲ ಘಟಕದ ಅಧ್ಯಕ್ಷರಾದ ಲೂವಿಸ್ ಡಿಸೋಜ, ವ್ಯಾಪರಸ್ಥರ ಘಟಕದ ಅಧ್ಯಕ್ಷರಾದ ಯಶೋಧರ ಭ೦ಡಾರಿ,ಉಮೇಶ್ ಶೆಟ್ಟಿ ಹೆಬ್ರಿ ಸೇರಿದ೦ತೆ ಸ೦ಘಟನೆಯ ತಾಲೂಕು,ವಿದ್ಯಾರ್ಥಿ ಘಟಕದ ಸದಸ್ಯರು ಹಾಜರಿದ್ದರು.

No Comments

Leave A Comment