Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಫೇಸ್ ಬುಕ್ ಲೈವ್..ನೋಡ, ನೋಡುತ್ತಲೇ 8 ಮಂದಿ ನೀರುಪಾಲು!

ನಾಗ್ ಪುರ್:ದೋಣಿ ವಿಹಾರದ ಸಂದರ್ಭದಲ್ಲಿ ಫೇಸ್ ಬುಕ್ ಲೈವ್ ಮಾಡುತ್ತಿರುವಾಗಲೇ ದೋಣಿ ಮುಳುಗಿ 8 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಾಗ್ ಪುರದ ವೆನಾ ಹೊಳೆಯಲ್ಲಿ ಸಂಭವಿಸಿದೆ.

ಭಾನುವಾರ ಸಂಜೆ ಸುಮಾರು 11 ಮಂದಿ ಹುಟ್ಟುಹಬ್ಬದ ಸಂತಸದಲ್ಲಿ ದೋಣಿ ವಿಹಾರ ಮಾಡುತ್ತಿದ್ದರು. ಈ ಖುಷಿಯ ಕ್ಷಣವನ್ನು ಫೇಸ್ ಬುಕ್ ಲೈವ್ ವಿಡಿಯೋ ಮಾಡುತ್ತಿರುವಾಗಲೇ ದೋಣಿ ದಿಢೀರನೆ ಮುಳುಗಿತ್ತು. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ ಮೂವರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

20, 25ರ ಹರೆಯದ ವಿದ್ಯಾರ್ಥಿಗಳು ವಿಡಿಯೋ ಮತ್ತು ಸೆಲ್ಫಿ ತೆಗೆಯುತ್ತಿರುವಾಗಲೇ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ. ಏಳು ಮಂದಿಯ ಶವ ಸಿಕ್ಕಿದ್ದು, ಒಬ್ಬನ ಶವಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.

No Comments

Leave A Comment