Log In
BREAKING NEWS >
ಗೋಶಾಲೆಯಲ್ಲಿ 200 ಹಸುಗಳ ಸಾವು ಪ್ರಕರಣ: ಬಿಜೆಪಿ ಮುಖಂಡ ಬಂಧನ....ಉಗ್ರರು ಒಳ ನಸುಳಿರುವ ಶಂಕೆ: ಶೋಪಿಯಾನ್ ಜಿಲ್ಲೆಯ 9 ಗ್ರಾಮಗಳಲ್ಲಿ ತೀವ್ರ ಸೇನಾ ಶೋಧ....

6,000 ಎನ್‌ಜಿಓಗಳ ವಿದೇಶೀ ದೇಣಿಗೆ ಸ್ವೀಕರಿಸುವ ಲೈಸನ್ಸ್‌ ರದ್ದು ಸಂಭವ

ಹೊಸದಿಲ್ಲಿ : ಕಳೆದ ಐದು ವರ್ಷಗಳಿಂದ ನಿರಂತರವಾಗಿ ವಾರ್ಷಿಕ ಲೆಕ್ಕ ಪತ್ರ, ಆದಾಯ ಮತ್ತು ಖರ್ಚು ಲೆಕ್ಕ ಪತ್ರಗಳನ್ನು ನೀಡದ ಸುಮಾರು ಆರು ಸಾವಿರ ಸರಕಾರೇತರ ಸೇವಾ ಸಂಘಟನೆಗಳು (ಎನ್‌ಜಿಓ) ಈಗಿನ್ನು ವಿದೇಶೀ ದೇಣಿಗೆ ಪಡೆಯವ ಲೈಸನ್ಸ್‌ ಕಳೆದುಕೊಳ್ಳಲಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಆರು ಸಾವಿರ ಎನ್‌ಜಿಓಗಳಿಗೆ ಈ ಬಗ್ಗೆ  ಜುಲೈ 8ರಂದು ನೊಟೀಸ್‌ ಜಾರಿ ಮಾಡಲಾಗಿದ್ದು ಜು.23ರೊಳಗೆ ಅವು ಸೂಕ್ತ ಉತ್ತರವನ್ನು ಕೊಡಬೇಕಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವರ್ಷ ಮೇ ತಿಂಗಳಲ್ಲಿ  18,523 ಎನ್‌ಜಿಓಗಳಿಗೆ ಜೂನ್‌ 14ರ ಒಳಗೆ ತಮ್ಮ ವಾರ್ಷಿಕ ಲೆಕ್ಕ ಪತ್ರ, ಖರ್ಚು-ಆದಾಯ ವಿವರಗಳನ್ನು ಸಲ್ಲಿಸುವಂತೆ ಒಂದು ಬಾರಿಯ ಅವಕಾಶವನ್ನು ನೀಡಲಾಗಿತ್ತು.

ವಿದೇಶ ವಂತಿಗೆ ನಿಯಂತ್ರಣ ಕಾಯಿದೆಯಡಿ ನೋಂದಾಯಿಸಿಕೊಂಡಿರುವ ಈ ಎನ್‌ಜಿಓಗಳು 2010-11ರಿಂದ ತೊಡಗಿ 2014-15ರ ವರೆಗಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದ ವಾರ್ಷಿಕ ಲೆಕ್ಕ ಪತ್ರ, ಖರ್ಚು-ಆದಾಯ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು.

No Comments

Leave A Comment