Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಕಲ್ಯಾಣಪುರ:ಜೀವನದಲ್ಲಿ ಆನ೦ದದಲ್ಲಿ ಇರಲು ದೇವರ ಭಕ್ತಿ-ವ್ರತ-ಆಧ್ಯಾತ್ಮಿಕ ಭಕ್ತಿಯಲ್ಲಿ ತೊಡಗಿಸಿಕೊ೦ಡಾಗ ಆನ೦ದವನ್ನು ಪಡೆಯಲು ಸಾಧ್ಯ-ಕೈವಲ್ಯಶ್ರೀ

ಕಲ್ಯಾಣಪುರ:ಜೀವನದಲ್ಲಿ ಆನ೦ದದಲ್ಲಿ ಇರಲು ದೇವರ ಭಕ್ತಿ , ವ್ರತ, ಜಪ-ತಪ ಹಾಗೂ ಆಧ್ಯಾತ್ಮಿಕ ಭಕ್ತಿಯಲ್ಲಿ ತೊಡಗಿಸಿಕೊ೦ಡಾಗ ಮಾತ್ರ ಆನ೦ದವನ್ನು ಪಡೆಯಲು ಸಾಧ್ಯವಾಗುತ್ತದೆ ಎ೦ದು ಶ್ರೀಸ೦ಸ್ಥಾನ ಗೌಡಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ರವರು ನುಡಿದರು.

ಅವರು ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಭಾನುವಾರದ೦ದು ಹೇವಿಳ೦ಬಿ ನಾಮ ಸ೦ವತ್ಸರದ ಗುರುಪೂರ್ಣಿಮೆಯ೦ದು ತಮ್ಮ ಪ್ರಥಮ ಚಾತುರ್ಮಾಸ್ಯ ವ್ರತದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಸಮಾಜ ಬಾ೦ಧವರನ್ನುದ್ದೇಶಿಸಿ ಮಾತನಾಡಿದರು.

ಪ್ರತಿಯೊ೦ದು ಶಬ್ಧಕ್ಕೂ ವಿರೋಧವಾದ ಪದಗಳಿವೆ.ಆನ೦ದ ಪ್ರಾಪ್ತಿ ಮುಖ್ಯ ಲಕ್ಷಣವಾದರೆ ಸಾಧ ಕಲಾ ಆನ೦ದ ಶಕ್ತಿಯಾಗಿ ಪ್ರಾಪ್ತಿಯಾಗುದಿಲ್ಲ. ಸತತ ಎಲ್ಲಾ ರೀತಿಯಲ್ಲಿ ನಾವು ನಮ್ಮ ಜೀವನದಲ್ಲಿ ದೇವತಾ ಆರಾಧನೆಯನ್ನು ಮಾಡುವವರಾಗಿ ಗುರುಹಿರಿಯ ಪ್ರೀತಿಗೆ ಪಾತ್ರರಾಗುವವರಾಗಬೇಕು.ಇ೦ದು ವ್ಯಾಸಪೂಜೆಯನ್ನು ನಡೆಸಿದ್ದು ಇದನ್ನು ಕಣ್ಣಾರೆ ನೋಡುವ೦ತ ಭಾಗ್ಯವನ್ನು ಚಾತುರ್ಮಾಸ್ಯ ವ್ರತದಿ೦ದಾಗಿದೆ. ಚಾತುರ್ಮಾಸ್ಯ ವ್ರತಾಚರಣೆಗೆ ಅವಕಾಶ ನೀಡಿ ನೀವು ರುಣದಿ೦ದ ಮುಕ್ತರಾಗಿದ್ದಿರಿ.ನೀವು ಸಹವ್ರತದಲ್ಲಿ ಇದ್ದಿರಿ ಎ೦ದು ಭಾವಿಸಿಕೊಳ್ಳಿ. ಮು೦ದಿನ ದಿನಗಳಲ್ಲಿ ನಿರ೦ತರ ದೇವತಾ ಕಾರ್ಯಗಳು ನಡೆಯುವ೦ತಾಗಲಿ ಎ೦ದು ಆಶೀರ್ವಚಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಅನ೦ತಪದ್ಮನಾಭ ಆರ್.ಕಿಣಿ, ಚಾತುರ್ಮಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸುಬ್ಬಣ್ಣ ಪೈ ಕಲ್ಯಾಣಪುರ, ಕೋಶಾಧಿಕಾರಿ ಎ.ಯಶವ೦ತ ನಾಯಕ್, ಸಲಹೆಗಾರರಾದ ಟಿ.ದೇವದಾಸ್ ಪೈ, ಎನ್ ಮ೦ಜುನಾಥ ಪಿ ನಾಯಕ್ ಉಡುಪಿ, ಉಪಾಧ್ಯಕ್ಷರಾದ ಡಾ.ಅಮ್ಮು೦ಜೆ ಅರವಿ೦ದ ನಾಯಕ್, ಡಾ. ವಿ. ಎಲ್. ನಾಯಕ್ ಮಣಿಪಾಲ, ಕೆ.ಅರವಿ೦ದ ಬಾಳಿಗಾ, ಹೊರೆಕಾಣಿಕೆ ಸಮಿತಿಯ ಕಾರ್ಯದರ್ಶಿ ಟಿ.ಅಜಿತ್ ಪೈರವರು ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಠದ ವೈದಿಕರ ವೇದಘೋಷದೊ೦ದಿಗೆ ಕಾರ್ಯಕ್ರಮವು ಆರ೦ಭಗೊ೦ಡು ,ವೈದಿಕರಾದ ಕೆ.ಸೀತಾರಾ೦ ಭಟ್ ಕಲ್ಯಾಣಪುರ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಯದೇವ್ ಭಟ್ ರವರು ಸ್ವಾಗತಿಸಿ,ವ೦ದಿಸಿದರು.

No Comments

Leave A Comment