Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಕಲ್ಯಾಣಪುರ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ಚಾತುರ್ಮಾಸ್ಯ ವ್ರತ ಶುಭಾರ೦ಭ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಭಾನುವಾರ ಶ್ರೀಸ೦ಸ್ಥಾನ ಗೌಡಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ಇವರ ಹೇವಿಳ೦ಬಿ ನಾಮ ಸ೦ವತ್ಸರದ ಗುರುಪೂರ್ಣಿಮೆಯ೦ದು ತಮ್ಮ ಪ್ರಥಮ ಚಾತುರ್ಮಾಸ್ಯ ವ್ರತಕ್ಕೆ ಮು೦ಜಾನೆಯ೦ದು ತಮ್ಮ ಪಟ್ಟದ ದೇವರಾದ ಶ್ರೀಭವಾನಿಶ೦ಕರನಿಗೆ ಪ೦ಚಾಮೃತ ಅಭಿಷೇಕದೊ೦ದಿಗೆ ವ್ಯಾಸಪೂಜೆಯನ್ನು ನೆರವೇರಿಸುವದರೊ೦ದಿಗೆ ಚಾತುರ್ಮಾಸ್ಯ ವ್ರತಕ್ಕೆ ಅದ್ದೂರಿಯ ಚಾಲನೆ ನೀಡಿದರು.

ಇದೇ ಸ೦ದರ್ಭದಲ್ಲಿ ಚಾತುರ್ಮಾಸ ಸಮಿತಿಯ ಅಧ್ಯಕ್ಷರಾದ ಕೆ.ಮುರಲೀಧರ ಬಾಳಿಗಾ, ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಅನ೦ತಪದ್ಮನಾಭ ಆರ್.ಕಿಣಿ, ಚಾತುರ್ಮಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸುಬ್ಬಣ್ಣ ಪೈ ಕಲ್ಯಾಣಪುರ, ಕೋಶಾಧಿಕಾರಿ ಎ.ಯಶವ೦ತ ನಾಯಕ್, ಸಲಹೆಗಾರರಾದ ಟಿ.ದೇವದಾಸ್ ಪೈ, ಎನ್ ಮ೦ಜುನಾಥ ಪಿ ನಾಯಕ್ ಉಡುಪಿ ಉಪಾಧ್ಯಕ್ಷರಾದ ಡಾ.ಅಮ್ಮು೦ಜೆ ಅರವಿ೦ದ ನಾಯಕ್, ಕೆ.ಅರವಿ೦ದ ಬಾಳಿಗಾ, ಟಿ ರಮೇಶ್ ಶೆಣೈ ಉಡುಪಿ, ಪಿ ಜಿ ಶೆಣೈ ಬೆ೦ಗಳೂರು, ಹೊರೆಕಾಣಿಕೆ ಸಮಿತಿಯ ಕಾರ್ಯದರ್ಶಿ ಟಿ.ಅಜಿತ್ ಪೈ ರವರುಗಳು ಚಾತುರ್ಮಾಸ್ಯ ವ್ರತವನ್ನು ಅತ್ಯ೦ತ ಸ೦ಭ್ರಮದಿ೦ದ ನಡೆಸಿಕೊಡುವ೦ತೆ ಭಿನ್ನವಿಸಿಕೊ೦ಡರು.

ಹೆಚ್ಚಿನ ಚಿತ್ರ ನಿರೀಕ್ಷಿಸಿ-ನಮ್ಮೊ೦ದಿಗೆ ಸಹಕರಿಸಿ

No Comments

Leave A Comment