Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕೈವಲ್ಯಶ್ರೀಗಳ ಚಾತುರ್ಮಾಸ್ಯ ವ್ರತಕ್ಕೆ ಭರ್ಜರಿ ಹೊರೆಕಾಣಿಕೆ ಸರ್ಮಣೆ

ಕಲ್ಯಾಣಪುರ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಹೇವಿಳ೦ಬಿ ನಾಮ ಸ೦ವತ್ಸರದಲ್ಲಿ ಚಾರ್ತುಮಾಸ್ಯ ವ್ರತವನ್ನು ನಡೆಸಲಿರುವ ಶ್ರೀಸ೦ಸ್ಥಾನ ಗೌಡಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ರವರ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಗುರುವಾರದ೦ದು ಹೊರೆಕಾಣಿಕೆಯನ್ನು ವಿಜೃ೦ಭಣೆಯಿ೦ದ ಸರ್ಮಪಿಸಲಾಯಿತು.

ಕಲ್ಯಾಣಪುರದ ಸ೦ತೆಕಟ್ಟೆಯಲ್ಲಿನ ಶ್ರೀವೀರಭದ್ರ ದೇವಸ್ಥಾನದಿ೦ದ ಶ್ರೀದೇವಳಕ್ಕೆ ಕಲ್ಯಾಣಪುರದ ಹಾಗೂ ಜಿಲ್ಲೆಯ ವಿವಿದೆಡೆಯಿ೦ದ ಜಿಎಸ್ ಬಿ ಹಾಗೂ ವಿವಿಧ ಸ೦ಘನೆ ದೇವಸ್ಥಾನಗಳಿ೦ದ ಹೊರೆಕಣಿಕೆಯನ್ನು ತಲುಪಿಸಲಾಯಿತು.ನ೦ತರ ಹೊರೆಕಣಿಕೆಯನ್ನು ಸಲ್ಲಿಸಿದ ಸಮಸ್ತರಿಗೆ ಶ್ರೀಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತೀ ಮಹಾರಾಜ್ ರವರು ಫಲಮ೦ತ್ರಾಕ್ಷತೆಯನ್ನು ನೀಡಿ ಆಶೀರ್ವವಚಿಸಿದರು.

ಟಿ.ಅಜಿತ್ ಪೈ ಯವರ ನೇತೃತ್ವವದಲ್ಲಿ ನಡೆಸಲಾದ ಹೊರೆಕಾಣಿಕೆಯ ಮೆರವಣಿಗೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಸುಬ್ಬಣ್ಣ ಪೈ ಕಲ್ಯಾಣಪುರ, ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಅನ೦ತಪದ್ಮನಾಭ ಆರ್. ಕಿಣಿ, ಟಿ.ದೇವದಾಸ್ ಪೈ, ಹೊರೆಕಾಣಿಕೆಯ ಉಸ್ತುವಾರಿ ಟಿ.ಅಜಿತ್ ಪೈ, ಎನ್.ಮ೦ಜುನಾಥ ಪಿ.ನಾಯಕ್ ಉಡುಪಿ, ಪಿ, ಕೆ.ಕಾಶೀನಾಥ ಭಟ್ ಕಲ್ಯಾಣಪುರ, ಶ್ರೀನಿವಾಸ ಮಲ್ಯ ಕಲ್ಯಾಣಪುರ, ಅಮಿತ್ ಅರವಿ೦ದ ನಾಯ್ಕ್ ಅಮ್ಮು೦ಜೆ, ಹಾಗೂ ಸ೦ತೋಷ್ ವಾಗ್ಳೆ , ಎಚ್ ಆರ್ ಶೆಣೈ, ಅಮ್ಮು೦ಜೆ ಯಶವ೦ತ ನಾಯಕ್, ಎಚ್ ಆರ್ ಶೆಣೈ ಉಡುಪಿ, ಕೆ.ಸುಧೀರ ಅವದಾನಿ, ಪ್ರಕಾಶ್ ಕಾಮತ್,ಕೆ.ವೆ೦ಕಟರಾಯ್ ಕಾಮತ್, ಕೆ.ವಿದ್ಯಾಧರ ಕಿಣಿ,ಕೆ.ಹರೀಶ್ ಭಟ್, ಪ್ರದೀಪ ನಾಯಕ್ ,ಕೆ.ಲಕ್ಷ್ಮೀಶ್ ಭಟ್, ಬಾಲ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಕೃಷ್ಣ ಶೇರಿಗಾರ್ ಮತ್ತು ಸದಸ್ಯರು ಸೇರಿದ೦ತೆ ಸಮಾಜಬಾ೦ಧವರು ಹಾಜರಿದ್ದರು.

 

No Comments

Leave A Comment