Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ವನಿತಾ ವಿಶ್ವಕಪ್‌: ಮಿಥಾಲಿ ಅರ್ಧಶತಕ ಭಾರತಕ್ಕೆ ಸತತ ನಾಲ್ಕನೇ ಗೆಲುವು

ಡರ್ಬಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತವು ವನಿತಾ ವಿಶ್ವಕಪ್‌ ಕ್ರಿಕೆ‌ಟ್‌ ಕೂಟದ ಬುಧವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 16 ರನ್ನುಗಳಿಂದ ಸೋಲಿಸಿ ಸೆಮಿಫೈನಲಿಗೇರುವ ಅವಕಾಶವನ್ನು ಉಜ್ವಲಗೊಳಿಸಿದೆ.

ದೀಪ್ತಿ ಶರ್ಮ ಮತ್ತು ಮಿಥಾಲಿ ರಾಜ್‌ ಅವರ ಅರ್ಧಶತಕದ ನೆರವಿನಿಂಧ ಭಾರತವು ಮೊದಲು ಬ್ಯಾಟಿಂಗ್‌ ನಡೆಸಿದ 8 ವಿಕೆಟಿಗೆ 232 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡವು 7 ವಿಕೆಟಿಗೆ 217 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.ಇದು ಭಾರತ ವನಿತೆಯರ ಸತತ ನಾಲ್ಕನೇ ಗೆಲುವು ಆಗಿದೆ. ಈ ಮೊದಲು ನಡೆದ ಪಂದ್ಯಗಳಲ್ಲಿ ಭಾರತವು ಆತಿಥೇಯ ಇಂಗ್ಲೆಂಡ್‌, ವೆಸ್ಟ್‌ಇಂಡೀಸ್‌ ಮತ್ತು ಪಾಕಿಸ್ಥಾನವನ್ನು ಸೋಲಿಸಿತ್ತು.

ಸಂಕ್ಷಿಪ್ತ ಸ್ಕೋರು: ಭಾರತ 8 ವಿಕೆಟಿಗೆ 232 (ಪೂನಂ ರಾವತ್‌ 16, ದೀಪ್ತಿ ಶರ್ಮ 78, ಮಿಥಾಲಿ ರಾಜ್‌ 53, ಹರ್ಮನ್‌ಪ್ರೀತ್‌ ಕೌರ್‌ 20, ವೇದಾ ಕೃಷ್ಣಮೂರ್ತಿ 29, ಶ್ರೀಪಾಲಿ ವೀರಕ್ಕೋಡಿ 28ಕ್ಕೆ 3, ಇನೋಕಾ ರಣವೀರ 55ಕ್ಕೆ 2).

ಶ್ರೀಲಂಕಾ 7 ವಿಕೆಟಿಗೆ 217 (ನಿಪುಣಿ ಹನ್ಸಿಕಾ 29, ಚಾಮರಿ ಅತ್ತಪಟ್ಟು 25, ಶಶಿಕಲಾ ಸಿರಿವರ್ಧನೆ 37, ದಿಲಾನಿ ಮನೋದರ 61, ಪ್ರಸಾದನಿ ವೀರಕ್ಕೋಡಿ 21 ಔಟಾಗದೆ, ಜೂಲನ್‌ ಗೋಸ್ವಾಮಿ 26ಕ್ಕೆ 2, ಪೂನಂ ಯಾದವ್‌ 23ಕ್ಕೆ 2).

No Comments

Leave A Comment