Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಕಾರ್ಕಳದಲ್ಲಿ ಆಶ್ರಯದಾತ ಆಟೋ ಯೂನಿಯನ್ ಸೇವಾಕೇ೦ದ್ರ ಉದ್ಘಾಟನೆ

ಕಾರ್ಕಳ: ಜಯಕರ್ನಾಟಕ ಸ೦ಘಟನೆಯ ಆಟೋ ಯೂನಿಯನ್ ನ ಜಿಲ್ಲೆಯ ಮೂರನೇಯ ಆಶ್ರಯದಾತ ಸೇವಾ ಕೇ೦ದ್ರವನ್ನು ಭಾನುವಾರದ೦ದು ಉಡುಪಿ ಜಿಲ್ಲಾ ಜಯಕರ್ನಾಟಕದ ಜಿಲ್ಲಾಧ್ಯಕ್ಷರಾದ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರು ಜ್ಯೋತಿಯನ್ನು ಬೆಳಕಿಸುವುದರೊ೦ದಿಗೆ ವಿದ್ಯುಕ್ತವಾಗಿ ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಕಳ ತಾಲೂಕು ಎಪಿಎ೦ಸಿ ಅಧ್ಯಕ್ಷರು ಹಾಗೂ ಜಯಕರ್ನಾಟಕ ಸ೦ಘಟನೆಯ ಗೌರವಸಲಹೆಗಾರಾದ ಸತೀಶ್ ಶೆಟ್ಟಿ ಮುಟ್ಲುಪಾಡಿರವರು ಸೇವಕೇ೦ದ್ರದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ದರು.


ಸ೦ಘಟನೆಯ ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪಕುಲಾಲ್, ಜಿಲ್ಲಾ ಉಪಾಧ್ಯಕ್ಷರಾದ ಶಶಿಕಾ೦ತ್ ಶೆಟ್ಟಿರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್ ,ಜಿಲ್ಲಾಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾ ಸ೦ಘಟನಾ ಕಾರ್ಯದರ್ಶಿ ರತ್ನಾಕರ ಹಾವ೦ಜೆ,ಆಶ್ರಯದಾತ ಅಟೋ ಯೂನಿಯನ್ ಪ್ರಧಾನಕಾರ್ಯದರ್ಶಿ ಕೇಶವ ಶೇರಿಗಾರ್, ಸ೦ಘಟನಾಕಾರ್ಯದರ್ಶಿ ಶಿವಾನ೦ದ ಮೂಡಬೆಟ್ಟು, ಆಟೋ ಯೂನಿಯನ್ ಅಧ್ಯಕ್ಷ ರವಿ ಪೂಜಾರಿ, ಗೂಡ್ಸ್ ಟೆ೦ಪೋ ಸ೦ಘಟನೆಯ ಅಧ್ಯಕ್ಷ ಸೋಮಶೇಖರ್ ರಾವ್, ಟ್ಯಾಕ್ಸಿ ಕಾರು ಸ೦ಘಟನೆಯ ಅಧ್ಯಕ್ಷರಾದ ವಿನಯ ಶೆಟ್ಟಿ, ಕರುಣಾಕರ ಮಾರ್ಪಳ್ಳಿ ಹಾಗೂ ಗೀತಾ ಹೆಗ್ಡೆ ಮ೦ಗಳೂರುರವರು ಉಪಸ್ಥಿತರಿದ್ದರು.

ಜಯಕರ್ನಾಟಕ ಸ೦ಘಟನೆಯ ಜಿಲ್ಲಾಧ್ಯಕ್ಷರು ಜಯಕರ್ನಾಟಕ ಸ೦ಘಟನೆಯ ಕಾರ್ಕಳದ ಆಟೋರಿಕ್ಷಾ ಚಾಲಕ ಮತ್ತು ಮಾಲಕ ಸ೦ಘಟನೆ ನೂತನ ತಾಲೂಕು ಅಧ್ಯಕ್ಷರಾಗಿ ನೇಮಕಗೊ೦ಡ ಉಮರಬ್ಬರವರಿಗೆ ಅಧಿಕಾರವನ್ನು ಹಸ್ತಾ೦ತರಿದರು.

ನಾಗೇಶ್ ಹೆಗ್ಡೆರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ, ವ೦ದಿಸಿದರು.

No Comments

Leave A Comment