Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಚಿತ್ರದುರ್ಗ: ಹವಳ ಮಾತನಾಡುತ್ತೆ, ಗಂಡಸರು ಸಾಯ್ತಾರಂತೆ; ವದಂತಿಗೆ ಕಿವಿಗೊಟ್ಟ ಮಹಿಳೆಯರು ತಾಳಿ ತೆಗೆದು ಹವಳ ಜಜ್ಜಿದರು!

ಚಿತ್ರದುರ್ಗ: ‘ಹವಳ ಮಾತನಾಡುತ್ತೆ, ಗಂಡಸರು ಸಾಯ್ತಾರಂತೆ’ ಎಂಬ ವದಂತಿ ನಂಬಿದ ಮಹಿಳೆಯರು ತಾಳಿಯ ಜತೆಗಿದ್ದ ಹವಳಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಬಳ್ಳಾರಿ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿರುವ ತಮ್ಮ ಸಂಬಂಧಕರಿಂದ  ಕೇಳಿ ಬಂದ ಫೋನ್ ಕರೆಗಳಿಂದ ಮೊಳಕಾಲ್ಮುರು ಗಡಿಭಾಗದ ಹಳ್ಳಿಗಳ ಮಹಿಳೆಯರು ಗಾಬರಿಗೊಂಡು ಹೀಗೆ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ಪತಿಯ ಜೀವಕ್ಕೆ ಕುತ್ತು ಬರುತ್ತದೆ ಎಂಬ ವದಂತಿಯನ್ನು ನಂಬಿದ  ಗೃಹಿಣಿಯರು ತಾಳಿಯ ಜೊತೆಯಿದ್ದ ಹವಳಗಳನ್ನು ಒಡೆದಿರುವ ಘಟನೆ ಬಳ್ಳಾರಿಯ ಕೂಡ್ಲಿಗಿಯಲ್ಲಿಯೂ ನಡೆದಿರುವುದು ವರದಿಯಾಗಿದೆ.

ಕೆಂಪು ಹವಳಕ್ಕೆ ಜೀವ ಬರುತ್ತದೆ, ಅದು ಮಾತನಾಡಿದರೆ ಪತಿ ಸಾವಿಗೀಡಾಗುತ್ತಾರೆ ಎಂಬ ವದಂತಿ ಹರಡಿದೆ.

No Comments

Leave A Comment