Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಅದ್ಧೂರಿಯಾಗಿ ನಡೆಯಿತು ರಕ್ಷಿತ್‌-ರಶ್ಮಿಕಾ ನಿಶ್ಚಿತಾರ್ಥ

ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಸೋಮವಾರ ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ನಡೆಯಿತು. ವಿರಾಜಪೇಟೆಯ ಸೆರಿನಿಟಿ ಹಾಲ್‌ನಲ್ಲಿ ಕಲರ್‌ಫ‌ುಲ್‌ ಆಗಿ ನಡೆದ ಈ ನಿಶ್ಚಿತಾರ್ಥದಲ್ಲಿ ರಕ್ಷಿತ್‌ ಹಾಗೂ ರಶ್ಮಿಕಾ ಪರಸ್ಪರ ವಜ್ರದ ಉಂಗುರ ಬದಲಿಸಿಕೊಂಡರು. ನಿಶ್ಚಿತಾರ್ಥಕ್ಕಾಗಿ ಸೆರಿನಿಟಿ ಹಾಲ್‌ ಅನ್ನು ಖ್ಯಾತ ಡೆಕೊರೇಟರ್‌ಗಳಾದ ಚಿತ್ರ ಅಯ್ಯಪ್ಪ ಹಾಗೂ ಅವರ ತಂಡ ಕಲರ್‌ಫ‌ುಲ್‌ ಆಗಿ ಸಿಂಗರಿಸುವ ಮೂಲಕ ನಿಶ್ಚಿತಾರ್ಥಕ್ಕೆ ಹೊಸ ಮೆರುಗು ನೀಡಲಾಗಿತ್ತು.

ರಕ್ಷಿತ್‌-ರಶ್ಮಿಕಾ ಸ್ನೇಹಿತರು, ಎರಡೂ ಕುಟುಂಬದ ಆಪ್ತರು ಹಾಗೂ ಚಿತ್ರರಂಗದ ಮಂದಿ ಕೂಡಾ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು. ಡಿಜೆ ಕೂಡಾ ಆಯೋಜಿಸಲಾಗಿತ್ತು. ವಿಶೇಷವಾಗಿ ವಿನ್ಯಾಸಗೊಳಿಸಿದ ಪೀಚ್‌ ಕಲರ್‌ನ ಗೌನ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಸ್ಪೆಷಲ್‌ ಸೂಟ್‌ನಲ್ಲಿ ರಕ್ಷಿತ್‌ ಶೆಟ್ಟಿ ಕಂಗೊಳಿಸುತ್ತಿದ್ದರು. ಪೀಚ್‌ ಹಾಗೂ ವೈಟ್‌ ಥೀಮ್‌ನಲ್ಲಿ ನಿಶ್ಚಿತಾರ್ಥ ಆಯೋಜಿಸಲಾಗಿತ್ತು.

ಬೆಳಗ್ಗೆ ವಿರಾಜಪೇಟೆಯ ಗಣಪತಿ ದೇವಾಲಯದಲ್ಲಿ ಎರಡೂ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. ರಕ್ಷತ್‌ ಕರಾವಳಿ ಹುಡುಗ, ರಶ್ಮಿಕಾ ಕೂರ್ಗ್‌ ಬೆಡಗಿಯಾಗಿದ್ದರಿಂದ ಕೊಡವ ಹಾಗೂ ತುಳುನಾಡಿನ ಸಂಪ್ರದಾಯದಂತೆ ನಿಶ್ಚಿತಾರ್ಥ ನಡೆಯಿತು. ಕೂರ್ಗ್‌ ಹಾಗೂ ಕರಾವಳಿ ಕಡೆಯ ವಿಶೇಷ ಬಗೆಯ ಖಾದ್ಯಗಳನ್ನು ಮಾಡಲಾಗಿತ್ತು.  ಇನ್ನು, ನಿಶ್ಚಿತಾರ್ಥದಲ್ಲಿ ಕೇವಲ ಕುಟುಂಬ ವರ್ಗವಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದ ಅನೇಕರು ಭಾಗವಹಿಸಿ ಜೋಡಿಗೆ ಶುಭ ಹಾರೈಸಿದರು

No Comments

Leave A Comment