Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ನಗರದ ಬಾರ್‌ಗಳಿಗೆ ರಿಲೀಫ್:ಹೆದ್ದಾರಿ ಡಿನೊಟಿಫೈಗೆ ಸುಪ್ರೀಂ ಅಸ್ತು

ಹೊಸದಿಲ್ಲಿ : ನಗರದ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಿದ್ದು, ಇದರಿಂದ ನಗರ ಪ್ರದೇಶಗಳಲ್ಲಿನ ಬಾರ್‌ ಮಾಲಿಕರು ನಿಟ್ಟುಸಿರು ಬಿಡುವಂತಾಗಿದೆ.

ನಗರ ಪ್ರದೇಶಗಳಲ್ಲಿ ಬರುವ ರಾಜ್ಯ ಹೆದ್ದಾರಿಗಳನ್ನು ನಗರ ಸ್ಥಳೀಯ ರಸ್ತೆಗಳಾಗಿ ಪರಿವರ್ತಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು, ಇದರಲ್ಲಿ ತಪ್ಪಿಲ್ಲ ಎಂದು ಸುಪ್ರೀಂ ಅಭಿಪ್ರಾಯ ತಿಳಿಸಿದೆ.

ಹೆದ್ದಾರಿ ಬದಿಯಲ್ಲಿ ಬಾರ್‌ಗಳಿರುವುದರಿಂದ ಚಾಲಕರು ಕುಡಿದು ಅತೀ ವೇಗದಲ್ಲಿ ಚಾಲನೆ ಮಾಡುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತದೆ ಎನ್ನುವ ಕಾರಣಕ್ಕೆ  ಬಾರ್‌ಗಳನ್ನು ಬಂದ್‌ ಮಾಡುವಂತೆ ಆದೇಶಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಕೋರ್ಟ್‌ ಆದೇಶ ಪ್ರಶ್ನಿಸಿ ಚಂದೀಘಡ ಆಡಳಿತ ಸಲ್ಲಿಸಿದ ಮನವಿ ವಿಚಾರಣೆ ನಡೆಸಿದ ಸುಪ್ರೀಂ ಈ ಮಹತ್ವದ ಅಭಿಪ್ರಾಯ ತಿಳಿಸಿದೆ.

ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಬಾರ್‌ಗಳಿದ್ದು, ರಾಜ್ಯ ಸರಕಾರ ನಗರ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳನ್ನು ನಗರ ಸ್ಥಳೀಯ ರಸ್ತೆಗಳಾಗಿ ಪರಿವರ್ತಿಸುವುದರಿಂದ ಸುಮಾರು 3 ಸಾವಿರ ಬಾರ್‌ ಮಾಲಕರು ನಿಟ್ಟುಸಿರು ಬಿಡುವಂತಾಗಿದೆ. ಆದರೆ,ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್‌ ವ್ಯಾಪ್ತಿಯಲ್ಲಿ 220 ಮೀಟರ್‌ ವ್ಯಾಪ್ತಿಯ ಬಾರ್‌ಗಳು ಬಂದ್‌ ಮಾಡಬೇಕಿದೆ.

ಕೋರ್ಟ್‌ನ ಈ  ಅಭಿಪ್ರಾಯದಿಂದ ಬೆಂಗಳೂರು ನಗರದ ಎಂಜಿ ರಸ್ತೆಯಲ್ಲಿನ ಸ್ಥಗಿತಗೊಂಡಿರುವ 138 ಕ್ಕೂ ಹೆಚ್ಚು  ಬಾರ್‌,ಪಬ್‌ಗಳು ಪುನರಾರಂಭಗೊಳ್ಳಲಿವೆ. ಮಾತ್ರವಲ್ಲದೆ ನಗರದ ಬ್ರಿಗೆಡ್‌ ರೋಡ್‌,ಇಂದಿರಾನಗರ ,ಕೋರಮಂಗಲದಲ್ಲಿರುವ ಬಾರ್‌ಗಳೂ ಪುನರಾರಂಭಗೊಳ್ಳಲಿವೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯಲ್ಲಿ ಬಾರ್‌ಗಳಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತವೆ ಎನ್ನುವ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಫೆಬ್ರವರಿಯಲ್ಲಿ ಹೆದ್ದಾರಿ ಪಕ್ಕದ ಬಾರ್‌ ಗಳನ್ನು ಬಂದ್‌ ಮಾಡುವಂತೆ ಆದೇಶ ಹೊರಡಿಸಿತ್ತು. ಅದರ ಅನ್ವಯ ಈಗಾಗಲೇ ರಾಜ್ಯ ಅಬಕಾರಿ ಇಲಾಖೆ ರಾಷ್ಟ್ರೀಯ ಹೆದ್ದಾರಿಯಲ್ಲಿ 500 ಮೀಟರ್‌ ವ್ಯಾಪ್ತಿಯೊಳಗಿರುವ ಎಲ್ಲ ಬಾರ್‌ಗಳನ್ನು ಸ್ಥಳಾಂತರಿಸುವಂತೆ ಕ್ರಮಕೈಗೊಂಡಿದೆ.

No Comments

Leave A Comment